ಕುಡುಕರ ಅವಾಂತರಗಳು ಒಂದೆರಡಲ್ಲ, ಎಣ್ಣೆ ಕಿಕ್‌ನಲ್ಲಿ ಅವರು ಏನು ಮಾಡುತ್ತಾರೆ ಎಂಬುದು ಅವರಿಗೆ ಗೊತ್ತಿರುವುದಿಲ್ಲ. ಹಾಗೆಯೇ ಇಲ್ಲೊಬ್ಬ ಕುಡುಕನನ್ನು ನೋಡಿ ಮಾಂಸ ತಿನ್ನುತ್ತಿದ್ದ ಸಿಂಹಗಳ ಗ್ಯಾಂಗೇ ಓಡಿ ಹೋಗಿವೆ. ಮೂರು ಸಿಂಹಗಳು ಯಾವುದೋ ಪ್ರಾಣಿಯನ್ನು ಬೇಟೆಯಾಡಿ ಮಾಂಸ ತಿನ್ತಿದ್ವು ಅಲ್ಲಿಗೆ ಬಂದ ಕುಡುಕನೋರ್ವ ಸಿಂಹಗಳನ್ನು ಬೀದಿ ನಾಯಿಗಳು ಕರೆಯುವಂತೆ ಸಿಟಿ ಹೊಡೆದು ಕರೆಯಲು ಶುರು ಮಾಡಿದ. ಹೀಗೆ ಸಿಂಹಗಳಿಗೆ ಕುಡುಕ ತೊಂದರೆ ಕೊಡ್ತಿದ್ದಂತೆ ಒಂದು ಸಿಂಹ ಮೇಲೆದ್ದು ಆ ಕುಡುಕನನ್ನು ಅಲ್ಲಿಂದ ಓಡಿಸಲು ಘರ್ಜಿಸುತ್ತಾ ಮುಂದೆ ಬಂದಿತ್ತು. ಆದ್ರೆ ಅಮಲಿನಲ್ಲಿದ್ದ ವ್ಯಕ್ತಿ ಭಯ ಪಡದೇ ತಾನು ಕೂಡ ಕೂಗುತ್ತಾ ಸಿಂಹದ ಕಡೆಗೆ ಮುನ್ನುಗ್ಗಿದ್ದ. ಇಲ್ಲಿದೆ ಆ ಘಟನೆಯ ಸಂಪೂರ್ಣ ದೃಶ್ಯ.