Sep 18, 2024, 11:32 PM IST
ಬೆಂಗಳೂರು (ಸೆ.18): ಹೆಜ್ಬೊಲ್ಲಾ ಉಗ್ರರ ವಿರುದ್ಧ ಇಸ್ರೇಲ್ನಿಂದ ಚಾಣಕ್ಷ ಯುದ್ಧ ನೀತಿ ರೂಪಿಸಿದ್ದು, ಇದಕ್ಕೆ ಜಗತ್ತು ಬೆಚ್ಚಿಬಿದ್ದಿದೆ. ಇಸ್ರೇಲ್ ಮೇಲೆ ದಾಳಿ ಮಾಡ್ತಿದ್ದ ಉಗ್ರರ ಸೊಂಟವನ್ನು ಮೊಸಾದ್ ಮುರಿದಿದೆ. ಹೆಜ್ಬೊಲ್ಲಾ ಉಗ್ರರ ಮೇಲೆ ಇಸ್ರೇಲ್ನಿಂದ ಪೇಜರ್ ಬಾಂಬ್ ದಾಳಿಯಾಗಿದೆ.
3 ಸಾವಿರಕ್ಕೂ ಹೆಚ್ಚು ಉಗ್ರರಿಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದು, 11 ಉಗ್ರರು ಬಲಿಯಾಗಿದ್ದಾರೆ. 400ಕ್ಕೂ ಹೆಚ್ಚು ಉಗ್ರರು ಸಾವು-ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾರೆ. ಇದರ ನಡುವೆ ಶತ್ರುಗಳ ಮೊಬೈಲ್ ಗಳನ್ನೂ ಇಸ್ರೇಲ್ ಬಾಂಬ್ನಂತೆ ಸ್ಪೋಟ ಮಾಡಲಿದ್ಯಾ ಎನ್ನುವ ಅನುಮಾನ ಕಾಡಿದೆ.
ಬುಕ್ ಬಾಂಬ್, ಟೂಥ್ಪೇಸ್ಟ್ ಪಾಯ್ಸನ್.. ಈಗ ಪೇಜರ್ ಬಾಂಬ್, ವಿರೋಧಿಗಳ ಮುಗಿಸಲು ಇಸ್ರೇಲ್ ಡೆಡ್ಲಿ ಅಟ್ಯಾಕ್ಸ್!
ಇಸ್ರೇಲ್ ವಿರೋಧಿಗಳಿಗೆ ಆನ್ ಲೈನ್ ಬಾಂಬ್ ದಾಳಿಯ ಭಯ ಶುರುವಾಗಿದೆ. ಇಸ್ರೇಲಿ ಯುದ್ಧ ತಂತ್ರದಿಂದ ಭಾರತದಂತಾ ದೇಶ ಕಲಿಯಬೇಕಿರೋದೇನು..? ಉಗ್ರರ ನಡ ಮುರಿಯಲು ಭಾರತವೂ ಇಸ್ರೇಲ್ ದಾರಿ ಹಿಡಿಯಬೇಕಾ..?