ಸಂಸತ್ ಸಂಚಿನ ರಹಸ್ಯವೇನು ಗೊತ್ತಾ..? ಯಾರು ಈ ಆಗಂತುಕರು? ಏನಿವರ ಅಸಲಿ ಕತೆ!

Dec 15, 2023, 2:50 PM IST

ಆಕೆ ನಿರುದ್ಯೋಗಿ,ಈತ ಇಂಜಿನಿಯರ್, ಒಬ್ಬ ಕಲಾವಿದ. ಇನ್ನೊಬ್ಬ ಆಟೋ ಡ್ರೈವರ್. ಪ್ರತಿಯೊಬ್ಬರ ಭಾಷೆ ಬೇರೆ. ರಾಜ್ಯ ಬೇರೆ.. ಕೆಲಸ ಬೇರೆ. ಡಿಸಂಬರ್ 13,ಈ ಡೇಟ್ ಕೇಳಿದ್ರೆ ಸಾಕು ಸಂಸತ್(Parliment) ಕಂಪಿಸಿಬಿಡುತ್ತೆ. ಯಾಕಂದ್ರೆ, ಎರಡು ದಶಕಗಳ ಹಿಂದೆ, ಇದೇ ದಿನ, ದೇಶವೇ ಬೆಚ್ಚಿಬೀಳುವಂಥಾ ಘಟನೆ ನಡೆದಿತ್ತು. ಅವತ್ತು ಭಾರತದ(India) ಭವ್ಯದೇವಾಲಯ ಅಂತ ಪರಿಗಣಿಸಲಾಗೋ, ಸಂಸತ್ ಮೇಲೆ ಲಷ್ಕರ್ ಎ ತೊಯ್ಬಾದ ಉಗ್ರಗಾಮಿಗಳು ದಾಳಿ ನಡೆಸಿದ್ರು. ದಾಳಿ(Attack) ನಡೆಸಿದ್ದ ಆ ಐದೂ ಉಗ್ರ ಸರ್ಪಗಳನ್ನೂ ನಮ್ಮವರು ಸಂಹಾರವನ್ನೇನೋ ಮಾಡಿದ್ರು.. ಆದ್ರೆ ದುರ್ದೈವವಶಾತ್, ನಮ್ಮ 9 ಮಂದಿ ಮಡಿದಿದ್ರು. ಒಂದು ವೇಳೆ, ಅವತ್ತೇನಾದ್ರೂ ಸ್ವಲ್ಪ ಯಾಮಾರಿದ್ದಿದ್ರೂ, ಸಂಸತ್ ಒಳಗಡೆ ಊಹೆ ಮಾಡೋಕೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗ್ತಾ ಇತ್ತು. ಈ ಘಟನೆ ಇನ್ನೂ ಹಸಿಹಸಿಯಾಗಿ, ಇನ್ನೂ ಒಣಗದ ಗಾಯವಾಗಿ ಕಾಡ್ತಾ ಇದೆ.. ಅಷ್ಟ್ರಲ್ಲೇ, ಅದೇ ಡಿಸಂಬರ್ 13ಕ್ಕೆ, ನಡೆಯಬಾರದ ಘಟನೆ ನಡೆದುಹೋಯ್ತು. ಹೆಚ್ಚು ಕಮ್ಮಿ ಪ್ರಧಾನಿ ನರೇಂದ್ರ ಮೋದಿ(Narendra modi) ಅವರು ಪಟ್ಟದ ಏರಿದಾಗಿನಿಂದಲೂ, ಭಯೋತ್ಪಾದಕ ಘಟನೆಗಳಿಗೆ ಅವಕಾಶವೇ ಇಲ್ಲದಂತಾಗಿದೆ. ಹಾಗೂ ಹೀಗೂ ಜಮ್ಮು ಕಾಶ್ಮೀರದಲ್ಲಿ ಉಗ್ರರು ಪ್ರತಾಪ ಮೆರೆಯೋ ಪ್ರಯತ್ನ ಮಾಡ್ತಾ ಇದ್ರು.ಈಗ ಅದೂ ಕೂಡ ನಿಂತುಹೋಗಿದೆ. ಹಾಗಾಗಿನೇ, ದೇಶವೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಆದ್ರೆ, ಚಳಿಗಾಲದ ಅಧಿವೇಶನದ ವೇಳೆ ನಡೆದ ಈ ದಾಳಿ ಇದ್ಯಲ್ಲಾ, ಇದು ಮಾತ್ರ, ಆ ನೆಮ್ಮದಿಗೇ ಕೊಳ್ಳಿ ಇಟ್ಟಿದೆ.

ಇದನ್ನೂ ವೀಕ್ಷಿಸಿ:  ದುಡ್ಡು ಕೇಳಲಿಲ್ಲ ಒಡವೆ ಮುಟ್ಟಲಿಲ್ಲ..! ಜಾತ್ರೆಗೆ ಹೋಗಿದ್ದ ವೃದ್ಧೆಯ ಕತ್ತು ಸೀಳಿದಾತ ಯಾರು ?