Jan 10, 2025, 11:49 PM IST
ಬೆಂಗಳೂರು (ಜ.10): L&T ಮುಖ್ಯಸ್ಥನ ಹೇಳಿಕೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಮನೆಯಲ್ಲಿ ಎಷ್ಟು ಹೊತ್ತು ಹೆಂಡ್ತಿ ಮುಖ ನೋಡ್ತಿರಾ? ಕಚೇರಿಗೆ ಬಂದು 90 ಗಂಟೆ ಕೆಲಸ ಮಾಡಿ ಎಂದು ಎಸ್ ಎನ್ ಸುಬ್ರಹ್ಮಣ್ಯನ್ ಹೇಳಿರುವುದು ವಿವಾದದ ಕಿಡಿ ಹೊತ್ತಿಸಿದೆ.
ದೇಶದಾದ್ಯಂತ ಇದರ ಬಗ್ಗೆ ಪರ ವಿರೋಧದ ಚರ್ಚೆಯಾಗಿದೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಎಸ್ ಎನ್ ಸುಬ್ರಹ್ಮಣ್ಯನ್ ಅವರ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ.
ವಾರಕ್ಕೆ 90 ಗಂಟೆ ಕೆಲಸ ಮಾಡಿ ಎನ್ನುವ L&T ಚೇರ್ಮನ್ ಸ್ಯಾಲರಿ ಸಾಮಾನ್ಯ ಉದ್ಯೋಗಿಗಿಂತ 530 ಪಟ್ಟು ಹೆಚ್ಚು!
ಕಂಪನಿಯ ಆಂತರಿಕ ಸಭೆಯಲ್ಲಿ ಮಾತನಾಡುವ ವೇಳೆ ಎಸ್ ಎನ್ ಸುಬ್ರಹ್ಮಣ್ಯನ್, ನಿಮ್ಮಿಂದ ಭಾನುವಾರವೂ ಕೆಲಸ ಮಾಡಿಸದೇ ಇರುವ ಬಗ್ಗೆ ನನಗೆ ವಿಷಾದವಿದೆ. ಬಾನುವಾರ ಎಷ್ಟೂ ಅಂತಾ ಹೆಂಡತಿಯ ಮುಖವನ್ನು ನೋಡುತ್ತಾ ಇರುತ್ತೀರಿ. ಕಚೇರಿ ಬಂದು ಕೆಲಸ ಮಾಡಿ ಎಂದು ಅವರು ಹೇಳಿರುವ ಮಾತು ವಿವಾದ ಸೃಷ್ಟಿಸಿದೆ.