News Hour: ಖಲಿಸ್ತಾನಿ ಬೆಂಬಲಿಗರ ವೋಟ್‌ಬ್ಯಾಂಕ್‌ಗಾಗಿ ಭಾರತದಂಥ ದೇಶದ ಸಂಬಂಧವನ್ನೇ ಕಡಿದ ಕೆನಡಾ!

Sep 19, 2023, 11:49 PM IST


ಬೆಂಗಳೂರು (ಸೆ.19): ಖಲಿಸ್ತಾನ ಹೋರಾಟದಿಂದ ಇದೀಗ ಭಾರತ-ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಶುರುವಾಗಿದೆ. ಹರ್ದೀಪ್‌ ಸಿಂಗ್‌ ನಿಜ್ಜರ್ ಕೊಲೆಗೆ ಭಾರತವೇ ಕಾರಣ ಎಂದು ಕೆನಡಾ ಆರೋಪ ಮಾಡಿದ್ದಲ್ಲದೇ,  ಭಾರತೀಯ ಅಧಿಕಾರಿಯನ್ನ ಉಚ್ಛಾಟನೆ ಮಾಡಿದೆ. ಇದಕ್ಕೆ ತಿರುಗೇಟು ನೀಡಿರೋ ಭಾರತ, ಒಂದೇ ಗಂಟೆಯಲ್ಲೇ ಕೆನಡಾ ಅಧಿಕಾರಿಯನ್ನ ಉಚ್ಛಾಟಿಸಿ 5 ದಿನದಲ್ಲಿ ದೇಶ ತೊರೆಯುವಂತೆ ಸೂಚನೆ ನೀಡಿದೆ.

ಜೂನ್ 18ರಂದು ಕೆನಡಾದಲ್ಲಿ ಶೂಟೌಟ್ನಲ್ಲಿ ಬಲಿಯಾಗಿದ್ದ ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಕೊಲೆ ಪ್ರಕರಣದಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಬಹಿರಂಗ ಆರೋಪ ಮಾಡಿದೆ..

ಖಲಿಸ್ತಾನಿಗಳ ಹೆಡೆಮುರಿ ಕಟ್ಟಿದ ಸರ್ಕಾರ, ಕೆನಡಾದ ನಡುರಸ್ತೆಯಲ್ಲಿಯೇ ಹೆಣವಾದ ಹರ್ದೀಪ್‌ ಸಿಂಗ್‌ ನಿಜ್ಜಾರ್‌! 

'ಕಳೆದ ಕೆಲ ವಾರಗಳ ಹಿಂದೆ ಕೆನಡಾ  ಗುಪ್ತಚರ ಇಲಾಖೆಯ ಆರೋಪದಂತೆ, ಕೆನಡಾದ ಪ್ರಜೆ ಹರ್ದೀಪ್ ಸಿಂಗ್ ಕೊಲೆಯ ಕೇಸ್‌ನಲ್ಲಿ ಭಾರತೀಯ ಏಜೆನ್ಸಿ ಸಕ್ರಿಯವಾಗಿದೆ ಎಂದು ಕೆನಡಾದ ಪ್ರಧಾನಿ ಜಸ್ಟೋನ್‌ ಟ್ರುಡೊ ಒಟ್ಟಾವದ ಸಂಸತ್ತಿನಲ್ಲೊ ಹೇಳಿದ್ದಾರೆ. ಜಿ20 ಶೃಂಗಸಭೆ ಮುಗಿಸಿಕೊಂಡು ಕೆನಡಾಗೆ ವಾಪಸ್ ಆಗುತ್ತಿದ್ದಂತೆ, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ತಮ್ಮ ಸಂಸತ್ತಿನಲ್ಲಿ ಇಂತಹ ಆರೋಪ ಮಾಡಿದ್ದಾರೆ.