Aug 5, 2023, 11:21 AM IST
ಕೇರಳದಲ್ಲಿ ಕರ್ನಾಟಕ ಪೊಲೀಸರು ಅರೆಸ್ಟ್ ಆದ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಅತಿಯಾದ ಹಣದ ಆಸೆಗೆ ಬಿದ್ದ ಪೊಲೀಸರು(police) ರಾಜ್ಯದ ಮಾನ ಮರ್ಯಾದೆ ಹರಾಜಾಕಿದ್ದಾರೆ. ಸೈಬರ್ ಕ್ರೈಮ್ (Cyber crime) ಪ್ರಕರಣದ ಆರೋಪಿ ಬಂಧನಕ್ಕೆ ಹೋಗಿದ್ದ, ವೈಟ್ ಫೀಲ್ಡ್ ಸೈಬರ್ ಕ್ರೈಂ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಹಾಗೂ ತಂಡ ಕೇರಳ ಪೊಲೀಸರ(Kerala police)ಬಳಿ ಲಾಕ್ ಆಗಿದೆ. ಅಸಲಿಗೆ ಆಗಿದ್ದು ಇಷ್ಟೇ.. ಸೈಬರ್ ಕ್ರೈಂ ಪ್ರಕರಣದ ಆರೋಪಿಯಾಗಿದ್ದ ಅಖಿಲ್‌ನನ್ನು ಇನ್ಸ್ಪೆಕ್ಟರ್ ಶಿವಪ್ರಕಾಶ್ ಆಂಡ್ ಟೀಂ ಅರೆಸ್ಟ್ ಮಾಡಿ ಕರ್ನಾಟಕಕ್ಕೆ ಕರೆತರುತ್ತಿತ್ತು. ಮಾರ್ಗ ಮಧ್ಯೆ ಹಣದ ಆಸೆಗೆ ಬಿದ್ದ ಪೊಲೀಸರು ಆಲ್ ರೆಡಿ 3.95 ಲಕ್ಷ ಹಣ ನೀಡಿದ್ರೂ ಮತ್ತೆ 3 ಲಕ್ಷ ಹಣಕ್ಕೆ(money) ಆರೋಪಿಗಳ ಬಳಿ ಡಿಮ್ಯಾಂಡ್ ಮಾಡಿದ್ದಾರೆ. ಈ ವೇಳೆ ಹಣ ಕೊಡುವುದಾಗಿ ಕರೆದೊಯ್ದ ಆರೋಪಿ ಅಖಿಲ್, ಕೇರಳದ ಕಲ್ಲಂಚೇರಿ ಪೊಲೀಸರ ಬಳಿ ಕರ್ನಾಟಕದ ಪೊಲೀಸರನ್ನು ಲಾಕ್ ಮಾಡಿಸಿದ್ದಾನೆ. ಇನ್ಸ್ಪೆಕ್ಟರ್ ಶಿವಪ್ರಕಾಶ್ ಆಂಡ್ ಟೀಂ ಆರೋಪಿ ಅಖಿಲ್‌ಗೆ ಆತನ ಮೊಬೈಲ್ ಫೋನ್ ಕೂಡ ಕೊಟ್ಟಿದ್ರು. ಈ ವೇಳೆ ತನ್ನ ಗರ್ಲ್ ಫ್ರೆಂಡ್ ಜೊತೆ ಮಾತಾನಾಡ್ತಿದ್ದ ಅಖಿಲ್, ಆಕೆಯ ಮಾತನ್ನು ಚಾಚುತಪ್ಪದೇ ಫಾಲೋ ಮಾಡಿದ್ದಾನೆ. ಆಕೆಯ ಪ್ಲಾನ್ ನಂತೆ ಇನ್ನೂ 3 ಲಕ್ಷ ಹಣ ನೀಡುವುದಾಗಿ, ಇನ್ಸ್ಪೆಕ್ಟರ್ ಶಿವಪ್ರಕಾಶ್ ಟೀಂನನ್ನು ನಂಬಿಸಿದ ಅಖಿಲ್, ಬಳಿಕ ಅವರನ್ನು ಕೊಚ್ಚಿಯ ಕಲ್ಲಂಚೇರಿಗೆ ಕರೆತಂದು ಹಣ ನೀಡುವಾಗ ಕೇರಳ ಪೊಲೀಸರ ಬಲೆಗೆ ಬೀಳಿಸಿದ್ದಾನೆ. ಕಲ್ಲಂಚೇರಿ ಪೊಲೀಸರು ಹಣ ಪಡೆಯುವಾಗ ರೆಡ್ ಹ್ಯಾಂಡಾಗಿ ವೈಟ್ ಫೀಲ್ಡ್ ಪೊಲೀಸರನ್ನು ಲಾಕ್ ಮಾಡಿ ಪ್ರಕರಣ ದಾಖಲು ಮಾಡಿದ್ದಾರೆ.
ಇದನ್ನೂ ವೀಕ್ಷಿಸಿ: ಕಾವಾಡಿಗರಹಟ್ಟಿಗೆ ಕೇಂದ್ರ, ರಾಜ್ಯ ಸಚಿವರು ಭೇಟಿ: ಡಿಸಿಗೆ ತಿಮ್ಮಾಪುರ ತರಾಟೆ