Sep 20, 2022, 11:04 PM IST
ಶಿವಮೊಗ್ಗದಲ್ಲಿನ ಐಸಿಸ್ ಲಿಂಕ್ ಗ್ಯಾಂಗ್‌ನ್ನು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೂವರು ಶಂಕಿತ ಉಗ್ರರ ಪೈಕಿ ಇಬ್ಬರು ಅರೆಸ್ಟ್ ಆಗಿದ್ದರೆ, ಮತ್ತೋರ್ವ ಪರಾರಿಯಾಗಿದ್ದಾನೆ. ಶಿವಮೊಗ್ಗದಲ್ಲಿ ಸಾವರ್ಕರ್ ಬ್ಯಾನರ್ ತೆರವುಗೊಳಿಸಿದ ಕಾರಣ ಸೃಷ್ಟಿಯಾದ ಗಲಭೆಯಲ್ಲಿ ಸಿಕ್ಕಿಬಿದ್ದ ಆರೋಪಿ ಮೊಬೈಲ್‌ನಿಂದ ಮಹತ್ವದ ಮಾಹಿತಿ ಕಲೆ ಹಾಕಿ ಪೊಲೀಸರು ಐಸಿಸ್ ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿವೆ. ಶಿವಮೊಗ್ಗದಲ್ಲಿ ಅರೆಸ್ಟ್ ಆಗಿರುವ ಶಂಕಿತ ಉಗ್ರರಿಬ್ಬರ ಹಿನ್ನಲೆ ಭಯಾನಕವಾಗಿದೆ. ಈಗಾಗಲೇ ಈ ಉಗ್ರರು ಭಯೋತ್ಪದಕ ಚಟುವಟಿಕೆಯಿಂದ ಬಂಧನಕ್ಕೊಳಗಾಗಿದ್ದಾರೆ. ಮಲೆನಾಡಿನಲ್ಲಿ ಕೂತ ಕರ್ನಾಟಕದಲ್ಲಿ ಭಾರಿ ವಿದ್ವಂಸಕ ಕೃತ್ಯ ಎಸಗಲು ಪ್ಲಾನ್ ಮಾಡಿದ್ದರು.