Apr 2, 2024, 5:02 PM IST
ಭಾರತಕ್ಕೆ ಸೇರಿದ್ದ ಕಚ್ಚತೀವು ದ್ವೀಪವನ್ನು ಎಪ್ಪತ್ತರ ದಶಕದಲ್ಲಿ ಶ್ರೀಲಂಕಾಗೆ(Srilanka) ಬಿಟ್ಟುಕೊಟ್ಟಿರುವ ವಿಚಾರ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ(Narendra Modi) ಸೇರಿದಂತೆ ಬಿಜೆಪಿಯ(BJP) ನಾಯಕರು ಈ ವಿಷಯದಲ್ಲಿ ಕಾಂಗ್ರೆಸ್(Congress) ವಿರುದ್ಧ ಹರಿಹಾಯುತ್ತಿದ್ದಾರೆ. ಎಲೆಕ್ಷನ್ ಸಂದರ್ಭದಲ್ಲಿ ಎದ್ದಿರುವು ಈ ವಿವಾದ ನ್ಯಾಷನಲ್ ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ಈ ಕಚ್ಚತೀವು ದ್ವೀಪದ(Kachchatheevu) ಹೆಸರನ್ನು ನಾವು ಇಲ್ಲಿತನಕ ಕೇಳಿಯೇ ಇರಲಿಲ್ಲ. ಯಾಕೆಂದ್ರೆ, 70ರ ದಶಕದ ಸರ್ಕಾರ ಭಾರತದ ಇತಿಹಾಸ ಪುಸ್ತಕದಿಂದಲೇ ಕಚ್ಚತೀವು ದ್ವೀಪದ ಹೆಸರನ್ನು ಅಳಿಸಿ ಹಾಕಿತ್ತು. ಹೀಗಾಗಿ ಇಲ್ಲಿವರೆಗೂ ನಮಗ್ಯಾರಿಗೂ ಈ ದ್ವೀಪದ ಪರಿಚಯವೂ ಇರಲಿಲ್ಲ. ಆದ್ರೆ, ಈಗ ಈ ದ್ವೀಪದ ಕುರಿತು ದೇಶದಲ್ಲಿ ದೊಡ್ಡ ವಿವಾದ ಶುರುವಾಗಿದೆ. ಎಲೆಕ್ಷನ್‌ನ ಈ ಸಂದರ್ಭದಲ್ಲಿ ಈ ವಿವಾದ ಬಿಜೆಪಿಗೆ ಅಸ್ತ್ರದಂತಾದ್ರೆ. ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ಬಿಸಿ ತುಪ್ಪವಾಗಿದೆ. ಕಚ್ಚತೀವು ಎಂಬ ಹೆಸರಿನ ಈ ದ್ವೀಪ ಭಾರತ ಮತ್ತು ಶ್ರೀಲಂಕಾ ಮಧ್ಯೆದಲ್ಲಿದೆ. ಶ್ರೀಲಂಕಾದ ನೆಡುತೀವು ಮತ್ತು ಭಾರತದ ರಾಮೇಶ್ವರಂ ನಡುವಿನ ಸಮುದ್ರ ಭಾಗದಲ್ಲಿ ಈ ದ್ವೀಪವಿದೆ.
ಇದನ್ನೂ ವೀಕ್ಷಿಸಿ: Amit Shah calls Eshwarappa: ಬಂಡಾಯ ಸ್ಪರ್ಧೆ ಬೇಡ, ಬೇಡಿಕೆ ಈಡೇರಿಸೋಣ ಎಂದಿರುವ ಅಮಿತ್ ಶಾ : ಈಶ್ವರಪ್ಪ