Russia-Ukraine War: ವೈದ್ಯಕೀಯ ಶಿಕ್ಷಣ ಬಿಟ್ಟು ಬಂದ ವಿದ್ಯಾರ್ಥಿಗಳ ಭವಿಷ್ಯದ ಕಥೆ ಏನು?

Mar 5, 2022, 12:49 PM IST

ಬೆಂಗಳೂರು(ಮಾ.05): ರಷ್ಯಾ ಸೇನಾ ಪಡೆಯ ದೈತ್ಯ ದಾಳಿಗೆ ಉಕ್ರೇನ್‌ ಛಿದ್ರಛಿದ್ರವಾಗಿದೆ. ಹೀಗಾಗಿ ಉಕ್ರೇನ್‌ನಿಂದ ಭಾರತೀಯ ವಿದ್ಯಾರ್ಥಿಗಳು ತವರಿಗೆ ವಾಪಸ್‌ ಆಗಿದ್ದಾರೆ. ಅರ್ಧಕ್ಕೆ ವೈದ್ಯಕೀಯ ಶಿಕ್ಷಣ ಬಿಟ್ಟು ಬಂದ ವಿದ್ಯಾರ್ಥಿಗಳ ಭವಿಷ್ಯದ ಕಥೆ ಏನು?. ಉಕ್ರೇನ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಭಾರತದಲ್ಲೇ ಸ್ಟಡಿ ಮುಂದುವರಿಸಬಹುದಾ? ಎಂಬೆಲ್ಲ ಪ್ರಶ್ನೆಗಳು ಇದೀಗ ಉದ್ಭವವಾಗಿವೆ. ವಿದ್ಯಾರ್ಥಿಗಳ ಮುಂದಿರುವ ಸವಾಲೇನು?, ಸರ್ಕಾರ ಮಾಡಬೇಕಾಗಿದ್ದೇನು ಇವೆಲ್ಲ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಭಾರತದಲ್ಲಿ ದುಬಾರಿ ಶುಲ್ಕ ಕಟ್ಟಲಾಗದೆ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಉಕ್ರೇನ್‌ಗೆ ತೆರಳಿದ್ದರು. ಇದೀಗ ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿರುವುದರಿಂದ ಎಂಬಿಬಿಎಸ್‌ ಪೂರ್ಣಗೊಳಿಸುವುದು ಕಷ್ಟಸಾಧ್ಯವಾಗಿದೆ.  

Russia-Ukraine War: ಮೈ ಕೊರೆಯುವ ಚಳಿ, ನಮ್ಮನ್ನು ರಕ್ಷಿಸಿ ಎಂದು ಭಾರತೀಯರ ಆರ್ತನಾದ