Aug 23, 2021, 6:05 PM IST
ಈಗಾಗಲೇ ಅಫ್ಘಾನಿಸ್ತಾನದಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ಅಲ್ಲಿಂದ ಏರ್‌ಲಿಫ್ಟ್ ಮಾಡಲಾಗಿದೆ. ಅದರಲ್ಲಿ ಕನ್ನಡಿಗರೂ ಸೇರಿದ್ದರು. ಬಹಳಷ್ಟು ಅಫ್ಘಾನ್ ನಿರಾಶ್ರಿತರಿಗೆ ಅಭಯ ನೀಡಲಾಗಿದೆ. ಈಗ ಕಾಬುಲ್ ವಿಮಾನ ನಿಲ್ದಾಣವನ್ನೂ ವಶಕ್ಕೆ ಪಡೆಯಲು ತಾಲೀಬಾನ್ ತಂತ್ರ ರೂಪಿಸುತ್ತಿರುವ ಹಿನ್ನೆಲೆಯಲ್ಲಿ ಭಾರತೀಯರನ್ನು ಕರೆತರಲು ಕಾರ್ಯಾಚರಣೆ ತ್ವರಿತವಾಗಿದೆ.
'ಗುಂಡಿಟ್ಟು ಮಹಿಳೆಯರ ಕೊಂದು ಶವದೊಂದಿಗೆ ತಾಲೀಬಾನಿಗಳ ಸೆಕ್ಸ್'
ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಯಲಿದೆ. ಇದರಲ್ಲಿ ಅಫ್ಘಾನ್‌ನಲ್ಲಿ ಸಿಕ್ಕಿ ಹಾಕಿಕೊಂಡ ಭಾರತೀಯರ ರಕ್ಷಣೆ ಕುರಿತು ರಾಜಕೀಯ ಪಕ್ಷದ ಮುಖಂಡರು ಚರ್ಚಿಸಲಿದ್ದಾರೆ.