May 26, 2022, 2:53 PM IST
ನವದೆಹಲಿ (ಮೇ. 26): ಭಾರತೀಯ ನೌಕಾಪಡೆಯು ತನ್ನ ಸರ್ಫೇಸ್ ಟು ಏರ್ ಮಿಸೈಲ್ (ಸ್ಯಾಮ್) ವ್ಯವಸ್ಥೆಯ (SAM System) ಮೂಲಕ ತನ್ನ ಯುದ್ಧನೌಕೆಗಳಲ್ಲಿ (War Ship) ಒಂದರಿಂದ ಕ್ಷಿಪಣಿಯ ಮೂಲಕ ಕೆಳಸ್ಥರದ ಟಾರ್ಗೆಟ್ ಪರೀಕ್ಷೆಯನ್ನು (low flying target) ಯಶಸ್ವಿಯಾಗಿ ಮಾಡಿ ಮುಗಿಸಿದೆ. ಸಂಪೂರ್ಣ ನಿಖರತೆಯಿಂದ ಟಾರ್ಗೆಟ್ ತಲುಪುವ ವೀಡಿಯೊವನ್ನು ಗುರುವಾರ ಹಂಚಿಕೊಂಡಿದೆ.
ಮಾರ್ಗದರ್ಶಿ-ಕ್ಷಿಪಣಿ ವಿರೋಧಿ ಜಲಾಂತರ್ಗಾಮಿ ಸ್ಟೆಲ್ತ್ ಫ್ರಿಗೇಟ್‌ನಿಂದ ಉಡಾವಣೆಗೊಂಡ ನಂತರ ಸ್ಯಾಮ್ ವ್ಯವಸ್ಥೆಯೊಂದಿಗೆ ನಂಬಲಾಗದ ವೇಗದಲ್ಲಿ ಗುರಿಯನ್ನು ತಲುಪಿರುವುದನ್ನು ವೀಡಿಯೊ ತೋರಿಸಿದೆ. ನಂತರ ಕ್ಷಿಪಣಿಯು ಮೇಲ್ಮೈ ಮೇಲಿರುವ ವಸ್ತುವನ್ನು ಹೊಡೆಯುತ್ತದೆ.
ನೌಕಾಸೇನೆ ಸೇವೆಯಿಂದ ನಿವೃತ್ತವಾದ ಹಡಗಿನಲ್ಲಿ ರಂಧ್ರ ನಿರ್ಮಿಸಿದ ಬ್ರಹ್ಮೋಸ್ ಕ್ಷಿಪಣಿ!
ಕ್ಷಿಪಣಿಯು ತನ್ನ ಸಿಲೋದಿಂದ ಹೊರಬಂದು ತನ್ನ ಗುರಿಯನ್ನು ಹೊಡೆಯಲು ಸ್ಥಾನವನ್ನು ತೆಗೆದುಕೊಳ್ಳುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಒಮ್ಮೆ ಉಡಾವಣೆಗೊಂಡ ನಂತರ, ಕ್ಷಿಪಣಿಯು ತನ್ನ ಗುರಿಯತ್ತ ಸಾಗುತ್ತದೆ ಮತ್ತು ನೀರಿನ ಮೇಲ್ಭಾಗದಲ್ಲಿ ನಿಗದಿ ಮಾಡಲಾಗಿದ್ದ ಕೆಳಸ್ತರದ ಟಾರ್ಗೆಟ್ ಅನ್ನು ಅತ್ಯಂತ ಯಶಸ್ವಿಯಾಗಿ ಸ್ಫೋಟಗೊಳಿಸಿದೆ.