ನೌಕಾಸೇನೆ ಸೇವೆಯಿಂದ ನಿವೃತ್ತವಾದ ಹಡಗಿನಲ್ಲಿ ರಂಧ್ರ ನಿರ್ಮಿಸಿದ ಬ್ರಹ್ಮೋಸ್ ಕ್ಷಿಪಣಿ!

ಭಾರತೀಯ ವಾಯುಸೇನೆ ಕೂಡ, ಪೂರ್ವ ಸಮುದ್ರ ತೀರದಲ್ಲಿ ಸುಖೋಯ್ ಫೈಟರ್ ಜೆಟ್‌ನಿಂದ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಮಂಗಳವಾರ ಯಶಸ್ವಿಯಾಗಿ ಪರೀಕ್ಷೆ ನಡೆಸಿತ್ತು.

BrahMos supersonic missile test fired by the Indian Navy warship INS Delhi created hole in the abandoned ship san

ನವದೆಹಲಿ(ಏ.20): ಭಾರತವು ಗೈಡೆಡ್ ಮಿಸೈಲ್ ಡಿಸ್ಟ್ರಾಯರ್ ಐಎನ್ ಎಸ್ ದೆಹಲಿಯಿಂದ (guided-missile destroyer INS Delhi) ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಯನ್ನು (BrahMos supersonic cruise missile) ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಕ್ಷಿಪಣಿಯ ಆಂಟಿ-ಶಿಪ್ ರೂಪಾಂತರದ ಪರೀಕ್ಷೆಯನ್ನು ಐಎನ್ ಎಸ್ ದೆಹಲಿಯಲ್ಲಿ ನವೀಕರಿಸಿದ ಮಾಡ್ಯುಲರ್ ಲಾಂಚರ್ ಬಳಸಿ ನಡೆಸಲಾಗಿದೆ.

"ನವೀಕರಿಸಿದ ಮಾಡ್ಯುಲರ್ ಲಾಂಚರ್‌ನಿಂದ ಐಎನ್ ಎಸ್ ದೆಹಲಿಯ ಯಶಸ್ವಿ ಚೊಚ್ಚಲ ಬ್ರಹ್ಮೋಸ್ ಫೈರಿಂಗ್,  ಬ್ರಹ್ಮೋಸ್‌ನ ದೀರ್ಘ-ಶ್ರೇಣಿಯ ಸ್ಟ್ರೈಕ್ ಸಾಮರ್ಥ್ಯವನ್ನು ಮತ್ತೊಮ್ಮೆ ಪ್ರದರ್ಶಿಸಿದೆ ಮತ್ತು ಮುಂಚೂಣಿಯ ವೇದಿಕೆಗಳಿಂದ ಸಮಗ್ರ ನೆಟ್‌ವರ್ಕ್ ಕೇಂದ್ರಿತ ಕಾರ್ಯಾಚರಣೆಗಳ ಮೌಲ್ಯೀಕರಣವನ್ನು ಪ್ರದರ್ಶಿಸಿದೆ" ಎಂದು ಭಾರತೀಯ ನೌಕಾಪಡೆಯು (Indian Navy) ಪರೀಕ್ಷಾರ್ಥ ಪ್ರಯೋಗದ ವೀಡಿಯೊದೊಂದಿಗೆ ಟ್ವೀಟ್ ಮಾಡಿದೆ.

ಬ್ರಹ್ಮೋಸ್ ಕ್ಷಿಪಣಿ ನಿರ್ಮಾಣದ ಅಧಿಕಾರಿಗಳು, ಸಿಡಿತಲೆ ಇಲ್ಲದೆ ಪರೀಕ್ಷೆ ಮಾಡಲಾಗಿರುವ ಬ್ರಹ್ಮೋಸ್ ಕ್ಷಿಪಣಿ ಅಂದಾಜು ಗಂಟೆಗೆ 3 ಸಾವಿರ ಕಿಲೋಮೀಟರ್ ವೇಗದಲ್ಲಿ ಸಂಚಾರ ಮಾಡಿದ್ದು, ನೌಕಾಸೇನೆ ಸೇವೆಯಿಂದ ನಿವೃತ್ತವಾಗಿರುವ ಯುದ್ಧನೌಕೆಯಲ್ಲಿ ದೊಡ್ಡ ರಂಧ್ರವನ್ನು ನಿರ್ಮಾಣ ಮಾಡಿದೆ ಎಂದು ತಿಳಿಸಿದ್ದಾರೆ.


"ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್ ಎಸ್ ದೆಹಲಿಯಿಂದ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಏಪ್ರಿಲ್ 19 ರಂದು ಪರೀಕ್ಷೆ ಮಾಡಲಾಯಿತು.. ಸಿಡಿತಲೆ ಇಲ್ಲದ ಕ್ಷಿಪಣಿಯು ಈಗಾಗಲೇ ಸೇವೆಯಿಂದ ನಿವೃತ್ತವಾಗಿರುವ ಯುದ್ಧನೌಕೆಯಲ್ಲಿ ರಂಧ್ರವನ್ನು ಸೃಷ್ಟಿಸಿದೆ. ಕ್ಷಿಪಣಿಯು ಗಂಟೆಗೆ 3,000 ಕಿಮೀ ವೇಗದಲ್ಲಿ ಚಲಿಸಿದ್ದು, ವಾಯು ರಕ್ಷಣಾ ವ್ಯವಸ್ಥೆಗಳಿಂದ ಪ್ರತಿಬಂಧಿಸುವುದು ಕಷ್ಟಕರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ, ತನ್ನ ಕಾರ್ಯಾಚರಣೆಯ ಸನ್ನದ್ಧತೆಯನ್ನು ಪ್ರದರ್ಶಿಸುವ ಮೂಲಕ, ಭಾರತೀಯ ವಾಯುಪಡೆಯು (IAF) ಅದೇ ಹಡಗಿನಲ್ಲಿ ಪೂರ್ವ ಸಮುದ್ರ ತೀರದಲ್ಲಿ ಸುಖೋಯ್ ಯುದ್ಧ ವಿಮಾನದಿಂದ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿತು. ಕ್ಷಿಪಣಿಯ "ಲೈವ್ ಫೈರಿಂಗ್" ಅನ್ನು ಭಾರತೀಯ ನೌಕಾಪಡೆಯೊಂದಿಗೆ ನಿಕಟ ಸಮನ್ವಯದಲ್ಲಿ ನಡೆಸಲಾಯಿತು ಎಂದು ಐಎಎಫ್  (Indian Air Force)ತಿಳಿಸಿದೆ. ಕ್ಷಿಪಣಿಯು ನಿಖರತೆ ಗುರಿಯನ್ನು ಮುಟ್ಟಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಡಿತಲೆಯೊಂದಿಗೆ ಕ್ಷಿಪಣಿ ನೇರವಾಗಿ ಯುದ್ಧನೌಕೆಯ ಮೇಲೆ ದಾಳಿ ಮಾಡಿದ್ದರಿಂದ, ನೌಕೆಯು ಸಮುದ್ರದಲ್ಲಿ ಮುಳುಗಿತು ಎಂದು ಹೇಳಿದ್ದಾರೆ.

"ಇಂದು ಪೂರ್ವ ಕಡಲತೀರದಲ್ಲಿ, #IAF Su30 MkI ವಿಮಾನದಿಂದ ಬ್ರಹ್ಮೋಸ್ ಕ್ಷಿಪಣಿಯ ಲೈವ್ ಫೈರಿಂಗ್ ನಡೆಸಲಾಯಿತು. ಸೇವೆಯಿಂದ ನಿವೃತ್ತವಾಗಿರುವ ಭಾರತೀಯ ನೌಕಾಪಡೆಯ ಹಡಗಿನ ಮೇಲೆ ಕ್ಷಿಪಣಿಯ ಗುರಿಯು ನಿಖರವಾಗಿತ್ತು. ನೌಕಾಪಡೆ ಜೊತೆ ನಿಕಟ ಸಮನ್ವಯದೊಂದಿಗೆ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು," ಎಂದು ಐಎಎಫ್ ಟ್ವೀಟ್ ನಲ್ಲಿ ತಿಳಿಸಿದೆ.

Pakistan Missile ಗುರಿ ತಲುಪಲು ವಿಫಲವಾದ ಪಾಕಿಸ್ತಾನದ ಮಿಸೈಲ್, ನೋ ಕಾಮೆಂಟ್ಸ್ ಎಂದ ಪಾಕ್ ರಕ್ಷಣಾ ಇಲಾಖೆ!

2016 ರಲ್ಲಿ, ಬ್ರಹ್ಮೋಸ್‌ನ ವಾಯು-ಉಡಾವಣಾ ರೂಪಾಂತರವನ್ನು 40 ಕ್ಕೂ ಹೆಚ್ಚು ಸುಖೋಯ್ ಫೈಟರ್ ಜೆಟ್‌ಗಳಿಗೆ ಸಂಯೋಜಿಸಲು ಸರ್ಕಾರ ನಿರ್ಧರಿಸಿತ್ತು. ಸಮುದ್ರ ಅಥವಾ ಭೂಮಿಯ ಮೇಲಿನ ಯಾವುದೇ ಗುರಿಯ ಮೇಲೆ ದೊಡ್ಡ ಸ್ಟ್ಯಾಂಡ್-ಆಫ್ ಶ್ರೇಣಿಗಳಿಂದ ಹೊಡೆಯುವ ಐಎಎಫ್ ಸಾಮರ್ಥ್ಯವನ್ನು ಹೆಚ್ಚಿಸಲು ಈ ಯೋಜನೆಯನ್ನು ಕಲ್ಪಿಸಲಾಗಿದೆ. ಮಾರ್ಚ್ 5 ರಂದು, ಭಾರತೀಯ ನೌಕಾಪಡೆಯು ಹಿಂದೂ ಮಹಾಸಾಗರದಲ್ಲಿ ಸ್ಟೆಲ್ತ್ ವಿಧ್ವಂಸಕದಿಂದ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಯ ಸುಧಾರಿತ ಆವೃತ್ತಿಯನ್ನು ಯಶಸ್ವಿಯಾಗಿ ಪರೀಕ್ಷಿಸಿತು. ಈ ಕ್ಷಿಪಣಿಯನ್ನು ಸ್ಟೆಲ್ತ್ ಡಿಸ್ಟ್ರಾಯರ್ ಐಎನ್‌ಎಸ್ ಚೆನ್ನೈನಿಂದ ಹಾರಿಸಲಾಯಿತು.

ಚೀನಾದಿಂದ 17.25 ಲಕ್ಷ ಕೋಟಿ ರಕ್ಷಣಾ ಬಜೆಟ್‌, ಭಾರತಕ್ಕಿಂತ 3 ಪಟ್ಟು ಹೆಚ್ಚು

ಬ್ರಹ್ಮೋಸ್ ಏರೋಸ್ಪೇಸ್, ಭಾರತ-ರಷ್ಯಾದ ಜಂಟಿ ಉದ್ಯಮವಾಗಿದ್ದು, ಸಬ್‌ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಉತ್ಪಾದಿಸುತ್ತದೆ, ಇದನ್ನು ಜಲಾಂತರ್ಗಾಮಿ ನೌಕೆಗಳು, ಹಡಗುಗಳು, ವಿಮಾನಗಳು ಅಥವಾ ಭೂ ವೇದಿಕೆಗಳಿಂದ ಉಡಾಯಿಸಬಹುದು. ಬ್ರಹ್ಮೋಸ್ ಕ್ಷಿಪಣಿ 2.8 ಮ್ಯಾಕ್ ವೇಗದಲ್ಲಿ ಅಥವಾ ಶಬ್ದಕ್ಕಿಂತ ಮೂರು ಪಟ್ಟು ವೇಗದಲ್ಲಿ ಹಾರುತ್ತದೆ. ಕ್ಷಿಪಣಿಯ ಸುಧಾರಿತ ಆವೃತ್ತಿಯ ವ್ಯಾಪ್ತಿಯನ್ನು ಮೂಲ 290 ಕಿಮೀಯಿಂದ ಸುಮಾರು 350 ಕಿಮೀಗೆ ವಿಸ್ತರಿಸಲಾಗಿದೆ ಎಂದು ತಿಳಿದುಬಂದಿದೆ.

 

Latest Videos
Follow Us:
Download App:
  • android
  • ios