ಕೋವಿಶೀಲ್ಡ್ ರಫ್ತಿಗೆ ನಿರ್ಭಂಧ: ಲಸಿಕೆ ಆತ್ಮನಿರ್ಭರ ಭಾರತಕ್ಕೆ ಸಿಕ್ಕ ಫಲ!

Jan 4, 2021, 4:04 PM IST

ನವದೆಹಲಿ(ಜ.04)'ಮೇಕ್ ಇನ್ ಇಂಡಿಯಾ' ಉತ್ಪನ್ನಗಳಿಗೆ ಜಾಗತಿಕ ಬೇಡಿಕೆ ಮಾತ್ರವಲ್ಲ.. ಜಾಗತಿಕ ಸ್ವೀಕಾರವನ್ನೂ ಖಚಿತ ಪಡಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ರಾಷ್ಟ್ರೀಯ ಪರಮಾಣು ಟೈಮ್‌ಸ್ಕೇಲ್ ಮತ್ತು ಭಾರತೀಯ ನಿರ್ದೇಶಕ್ ದ್ರಾವ್ಯವನ್ನು ಉದ್ಘಾಟಿಸಿದರು. ಬಳಿಕ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಷನಲ್ ಮೆಟ್ರಾಲಜಿ ಕಾನ್ ಕ್ಲೇವ್ ನಲ್ಲಿ ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಪ್ರಧಾನಿ ಮೋದಿ, 'ಎರಡು ಸ್ವದೇಶಿ ನಿರ್ಮಿತ ಕೋವಿಡ್-19 ಲಸಿಕೆಗಳನ್ನು ಹೊರಗೆ ತರಲು ಭಾರತೀಯ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಇಡೀ ದೇಶವು ತನ್ನ ವಿಜ್ಞಾನಿಗಳ ಬಗ್ಗೆ ಹೆಮ್ಮೆಪಡುತ್ತದೆ ಎಂದು ಹೇಳಿದರು.

ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್; ವ್ಯಕ್ತಿ ಬಂಧಿಸಿ ಗಲಭೆ ತಪ್ಪಿಸಿದ ಪೊಲೀಸ್!

ಇದೇ ವೇಳೆ 'ಮೇಕ್ ಇನ್ ಇಂಡಿಯಾ' ಉತ್ಪನ್ನಗಳಿಗೆ ಜಾಗತಿಕ ಬೇಡಿಕೆ ಮಾತ್ರವಲ್ಲ.. ಜಾಗತಿಕ ಸ್ವೀಕಾರವನ್ನೂ ಖಚಿತ ಪಡಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.