ಕದನ ಕಿಚ್ಚು..  ಟ್ರಂಪ್ ಸ್ವಹಿತಾಸಕ್ತಿಯ ಹುಚ್ಚು.. ಹೇಗಿತ್ತು ಭಾರತದ ಪಂಚು..?

ಕದನ ಕಿಚ್ಚು.. ಟ್ರಂಪ್ ಸ್ವಹಿತಾಸಕ್ತಿಯ ಹುಚ್ಚು.. ಹೇಗಿತ್ತು ಭಾರತದ ಪಂಚು..?

Published : May 14, 2025, 01:58 PM IST

ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದಕ್ಕೆ ಟ್ರಂಪ್ ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ. ಭಾರತ ಮಾತ್ರ ಈ ವಿಚಾರವನ್ನು ಅಲ್ಲಗಳೆದಿದೆ. ಟ್ರಂಪ್ ಹೇಳಿಕೆ ಬಿಟ್ಟಿ ಬಿಲ್ಡಪ್ ಎಂದು ಭಾರತ ಪರೋಕ್ಷವಾಗಿ ಟೀಕಿಸಿದೆ.

ಭಾರತ ಪಾಕ್ ಸಂಘರ್ಷವನ್ನ ನಿಜಕ್ಕೂ ಟ್ರಂಪ್ ನಿಲ್ಲಿಸಿದ್ರಾ..? ಯುದ್ಧ  ನಿಲ್ಲಿಸಿದೆ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡು ವಿದೂಷಕನಾದ್ರಾ ಟ್ರಂಪ್..? ಎರಡು ದೇಶಗಳ ನಡುವಿನ ಕದನ ಕಿಚ್ಚಿನ ಮಧ್ಯೆ ಟ್ರಂಪ್​ಗ್ಯಾಕೆ ಸ್ವಹಿತಾಸಕ್ತಿಯ ಹುಚ್ಚು..? ಹೇಗಿತ್ತು ಭಾರತದ ಪಂಚು..? ಬಿಟ್ಟಿ ಬಿಲ್ಡಪ್ಪು.. ಪುಕ್ಸಟ್ಟೆ ಪೋಸು.. ಟ್ರಂಪಣ್ಣ.. ಹಿಂಗ್ಯಾಕಣ್ಣಾ..? ಟ್ರಂಪ್ ಶಕುನಿಯಾಟಕ್ಕೆ ಭಾರತ ಕೊಟ್ಟಿದ್ದೆಂಥಹ ಖಡಕ್ ಉತ್ತರ. ಇದೇ ಇವತ್ತಿನ ಸುವರ್ಣ ಸ್ಪೆಷಲ್ ದೊಡ್ಡಣ್ಣನ ಬಿಟ್ಟಿ ಬಿಲ್ಡಪ್..

ಕದನ ವಿರಾಮದಲ್ಲಿ ಟ್ರಂಪ್ ಮಧ್ಯಸ್ಥಿಕೆಯಿತ್ತಾ..? ಈ ವಿಚಾರವಾಗಿ ಭಾರತ ಮತ್ತೊಂದು ಬಾರಿ ಸ್ಪಷ್ಟನೆ ಕೊಟ್ಟಿದೆ. ಹಾಗಿದ್ರೆ, ಭಾರತ ನೇರವಾಗಿ ಕೊಟ್ಟಿರೋ ಆ ಸ್ಪಷ್ಟ ಉತ್ತರ 
ನಾನೇ ಯುದ್ಧ ನಿಲ್ಲಿಸಿದ್ದು.. ನಾನೇ ಮಹಾ ಸಂಘರ್ಷ ತಪ್ಪಿಸಿದ್ದು ಅಂತ ಟ್ರಂಪ್ ಬಡಾಯಿ ಕೊಚ್ಚಿಕೊಳ್ತಾ ಇದ್ರೆ, ಇತ್ತ ಭಾರತದಲ್ಲಿ ಈ ವಿಚಾರ ರಾಜಕೀಯ ಜಿದ್ದಾಜಿದ್ದಿಗೂ ಕಾರಣವಾಗಿತ್ತು. ಈ ಮಧ್ಯೆ ವಿದೇಶಾಂಗ ಸಚಿವಾಲಯ ಸ್ಪಷ್ಟೀಕರಣ ಕೊಟ್ಟಿದ್ದು, ಟ್ರಂಪ್ ಪಾತ್ರವನ್ನ ಅಲ್ಲಗಳೆಯಲಾಗಿದೆ.

ಟ್ರಂಪ್​ಗೆ ಒಂದು ಆಸೆಯಿದೆ.. ಅದೊಂತರ ಈಡೇರದ ಹುಚ್ಚು ಆಸೆ.. ಇಡೀ ಜಗತ್ತಿನ ಸೂತ್ರದಾರ ನಾನಾಗಬೇಕು ಅನ್ನೋ ಈಡೇರದ ಆಸೆಯಲ್ಲಿ ಟ್ರಂಪ್ ಇದ್ದಾರೆ. ಆದ್ರೆ, ಬದಲಾಗಿರೋ ಜಿಯೋ ಪಾಲಿಟಿಕ್ಸ್​​ನಿಂದ ಅಮೆರಿಕಾ ಹೇಳಿದ ಹಾಗೆ ಕುಣಿಯೋ ಸ್ಥಿತಿಯಲ್ಲಿ ಜಗತ್ತಿಲ್ಲ. ದೊಡ್ಡಣ್ಣನ ಕೈನಿಂದ ಜಗತ್ತಿನ ಕಂಟ್ರೋಲ್ ತಪ್ಪಿ ಬಹಳ ಸಮಯವೇ ಕಳೆದಿದೆ. 

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more