
ಪಾಕಿಸ್ತಾನದ ವಿರುದ್ಧ ಭಾರತ ಗಟ್ಟಿಯಾದ ನಿಲುವು ತೆಗೆದುಕೊಳ್ಳಲು ಸಿದ್ಧವಾಗಿದೆ. ಉಗ್ರರ ಕೃತ್ಯಗಳಿಗೆ ತಕ್ಕ ಉತ್ತರ ನೀಡಲು ಭಾರತ ಸನ್ನದ್ಧವಾಗಿದೆ.
ಬೆಂಗಳೂರು (ಏ.26): ಪಾಕಿಸ್ತಾನದ ಪಾಪದ ಕೊಡ ತುಂಬಿ ತುಳುಕುತ್ತಿದೆ. ಅಷ್ಟಿಲ್ಲದೇ ಇದ್ದಿದ್ರೆ, ಭಾರತದ ಜೊತೆ ಇಂಥಧ್ದೊಂದು ವಿಷಮ ಪರಿಸ್ಥಿತಿ ಉದ್ಭವ ಆಗುತ್ತಲೇ ಇರಲಿಲ್ಲ. ಭಾರತ ಗಟ್ಟಿಯಾಗಿ ಚಿಟಿಕೆ ಹೊಡೆದರೇ ಗಡಗಡ ನಡುಗೋ ಪಾಪಿದೇಶ, ಈಗ ರಣರಂಗದಲ್ಲಿ ತನ್ನ ಉಗ್ರ ಪ್ರತಾಪ ಮೆರೀತಿನಿ ಅಂತ, ತೊಡೆ ತಟ್ಟುತ್ತಿದೆ.
ಆದರೆ, ಆ ಪಾಪಿಸ್ತಾನದಲ್ಲಿರೋ ಪಾತಕಿಗಳ ಸಂಹಾರಕ್ಕೆ ಭಾರತ ಸರ್ವ ಸನ್ನದ್ಧವಾಗಿದೆ. ಮಾಡಬಾರದ ಅಪರಾಧವೆಸಗಿರೋ ಪಾಪಿದೇಶಕ್ಕೆ ಭಾರತ ಹೇಗೆ ಉತ್ತರ ನೀಡಲಿದೆ ಅನ್ನೋದು ಎಲ್ಲರ ಕುತೂಹಲ.
ಟೂರ್ ಗೈಡ್‌ಗಳು ಸೇನೆಗೆ ಮಾಹಿತಿ ನೀಡದ್ದೇ ನರಮೇಧಕ್ಕೆ ಕಾರಣವಾಯ್ತಾ?
ಶಾಂತವಾಗಿದ್ದ ಕಣಿವೆಯಲ್ಲಿ ಆತಂಕದ ಕಿಚ್ಚು ಹೊತ್ತಿಸಿದ್ದಾರೆ ಉಗ್ರರು. ಆದರೆ ಅದೇ ಕಿಚ್ಚು, ಅವರನ್ನೇ ಬಡಬಾಗ್ನಿಯ ಹಾಗೆ ದಹಿಸಲಿದೆ ಅನ್ನೋದೇ ಅವರಿಗೆ ಮರೆತು ಹೋಗಿತ್ತು. ಅದನ್ನ ನೆನಪಿಸೋಕೆ ಭಾರತ ಸನ್ನದ್ಧವಾಗಿದೆ.