Santosh Naik | Updated: Apr 14, 2025, 6:46 PM IST
ಬೆಂಗಳೂರು (ಏ.14): ಟಿಕ್.. ಟಿಕ್.. ಟಿಕ್.. ಟಿಕ್.. ಸಮಯ ಓಡ್ತಾ ಇದೆ.. ಸಮಯ ಓಡಿದ ಹಾಗಿಲ್ಲ, ಭಾರತಕ್ಕೊಂದು ಕಂಟಕ ಹತ್ತಿರ ಬರ್ತಾ ಇದೆ.. ಭೂಮಿಗೆ ಈಗ ಎಂಟರ ಕಂಟಕ.. ಅದರಲ್ಲೂ ಭಾರತಕ್ಕೇ ಅತಿದೊಡ್ಡ ಗಂಡಾಂತರ ಎದುರಾಗಿಬಿಟ್ಟಿದೆ.
ಜನ ನೆಮ್ಮದಿಯಾಗಿ ನಿದ್ರಿಸೋಕೂ ಸಾಧ್ಯವಾಗದ ಸಂಗತಿಯೊಂದನ್ನ ವಿಜ್ಞಾನಿಗಳು ಬಯಲಾಗಿಸಿದ್ದಾರೆ.. ವಿಜ್ಞಾನಿಗಳು ಪತ್ತೆ ಹಚ್ಚಿರೋ ಆ ಭಯಾನಕ ಭವಿಷ್ಯ ಏನು? ದೇಶದ ಯಾವ್ಯಾವ ಭಾಗಗಳಿಗೆ ಕಂಟಕ ಎದುರಾಗಿದೆ? ಈ ಕಂಟಕದ ಹಿಂದಿರೋ ಕಾರಣ ಏನು?
ಎರಡು ಭಾಗಗಳಾಗಿ ವಿಂಗಡನೆಯಾಗ್ತಿದೆ ಭಾರತದ ಭೂಭಾಗ? ವಿಜ್ಞಾನಿಗಳಿಂದ ಭೀಕರ ಭೂಕಂಪದ ಸುಳಿವು
ಭಾರತ, ಭೂಕಂಪ ವ್ಯೂಹದ ಮಧ್ಯದಲ್ಲಿ ಸಿಲುಕಿಕೊಂಡಿದೆ.. ಯಾವಾಗ ಬೇಕಿದ್ರು ಎಂಥಾ ಅನಾಹುತವಾದ್ರೂ ಸಂಭವಿಸಬಹುದು ಅಂತಿದ್ದಾರೆ, ಭೂವಿಜ್ಞಾನ ತಜ್ಞರು.. ಅಷ್ಟಕ್ಕೂ ಅವರು ಈ ಮಾತು ಹೇಳೋಕೆ ಕಾರಣ ಏನು? ಭೂಕಂಪ ವ್ಯೂಹದ ಕತೆ ಏನು?