ಪ್ರಧಾನಿ ಮೋದಿ ನೇತೃತ್ವದಲ್ಲಿಂದು ಸರ್ವ ಪಕ್ಷ ಸಭೆ

Jun 19, 2020, 11:20 AM IST

ನವದೆಹಲಿ(ಜೂ.19): ಗಡಿಯಲ್ಲಿ ಯುದ್ಧದ ಕಾವು ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಇಂದು ಸರ್ವಪಕ್ಷಗಳ ಸಭೆ ನಡೆಸಲಿದ್ದಾರೆ. ಉಭಯ ದೇಶಗಳ ನಡುವೆ ಸೇನಾಧಿಕಾರಿಗಳ ಶಾಂತಿ ಮಾತುಕತೆ ಫಲಪ್ರದವಾಗದ ಹಿನ್ನೆಲೆಯಲ್ಲಿ ಶುಕ್ರವಾರ(ಜೂ.19) ನಡೆಯುವ ಸರ್ವಪಕ್ಷಗಳ ಸಭೆ ಕುತೂಹಲ ಮೂಡಿಸಿದೆ.

ಪೂರ್ವ ಲಡಾಖ್‌ನ ಗಲ್ವಾನ್ ಪ್ರದೇಶದಲ್ಲಿ ಚೀನಿ ಸೈನಿಕರು ನಿರಾಯುಧ ಭಾರತೀಯ ಪಡೆಯ ಮೇಲೆ ಮುಗಿಬಿದ್ದು 20 ಯೋಧರನ್ನು ಹತ್ಯೆ ಮಾಡಿದೆ. ಗಡಿಯಲ್ಲಿ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಂಡಿದೆ.

ಗಡಿ ಸಂಘರ್ಷ: 58 ಭಾರತೀಯ ಸೈನಿಕರಿಗೆ ಗಾಯ

ಇದೀಗ ಪ್ರಧಾನಿ ಮೋದಿ ಇಂದು ಸಂಜೆ 5 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸರ್ವಪಕ್ಷಗಳ ಸಭೆ ನಡೆಸಲಿದ್ದಾರೆ. ಗಡಿ ಗಲಾಟೆಗೆ ಸಂಬಂಧಿಸಿದಂತೆ ಮುಂದಿನ ಕ್ರಮಗಳ ಬಗ್ಗೆ ಎಲ್ಲಾ ಪಕ್ಷಗಳ ಅಭಿಪ್ರಾಯ ಹಾಗೂ ಸಲಹೆಗಳನ್ನು ಮೋದಿ ಪಡೆಯಲಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.