
ಭಾರತದ ನಡೆ ಪಾಕಿಸ್ತಾನ ಹಾಗೂ ಚೀನಾವನ್ನು ಬೆಚ್ಚಿ ಬೀಳಿಸಿದೆ. ಭಾರತದ ನೇರವಾಗಿ ಆಫ್ಘಾನಿಸ್ತಾದ ತಾಲಿಬಾನಿ ಮಂತ್ರಿಗಳ ಜೊತೆ ಮಾತುಕತೆ ನಡೆಸಿದೆ. ಇದು ಪಾಕಿಸ್ತಾನ ಹಾಗೂ ಚೀನಾ ನಿದ್ದೆಗೆಡಿಸಿದ್ದು ಹೇಗೆ?
ಅಫ್ಘಾನ್ ಹಾಗೂ ಭಾರತದ ಮಧ್ಯೆ ಪಾಕಿಸ್ತಾನ ಅನ್ನೋ ಪಾಪಿದೇಶವಿದೆ.. ಅದಕ್ಕೆ ಅಫ್ಘಾನ್ ಉದ್ಧಾರವಾಗೋದೂ ಬೇಕಿಲ್ಲ. ಭಾರತ ಮತ್ತೊಂದು ಇಸ್ಲಾಮಿಕ್ ದೇಶದ ಜೊತೆ ಸೇರೋದು ಬೇಕಿಲ್ಲ..ಬರೋಬ್ಬರಿ ಎರಡೂ ವರೆ ದಶಕಗಳ ನಂತರ, ಯಾವುದೋ ದೇಶದಲ್ಲಿ ರಿಂಗ್ ಆದ ಫೋನ್ ಕಾಲ್, ಎರಡು ದೇಶಗಳ ಭವಿಷ್ಯ ಬದಲಿಸಿದರೆ, ಇನ್ನೆರಡು ದೇಶಗಳ ನಿದ್ದೆಗೆಡಿಸಿದೆ. ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಫ್ಘಾನಿಸ್ತಾನದ ತಾಲಿಬಾನಿ ಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದರೆ. ಈ ಮಾತುಕತೆ ಪಾಕಿಸ್ತಾನ ಹಾಗೂ ಚೀನಾದ ನಿದ್ದೆಗೆಡಿಸಿದೆ.