ಅಕ್ರಮ ಬಯಲಿಗೆಳೆದ ವರದಿಗಾರ್ತಿ ಮೇಲೆ ಪ್ರಕರಣ: ಪತ್ರಕರ್ತರಿಂದ ಕೇರಳದಲ್ಲಿ ಪ್ರತಿಭಟನೆ

Jun 12, 2023, 1:25 PM IST

ಮಹಾರಾಜ್ ಕಾಲೇಜಿನಲ್ಲಿ ನಡೆದಿರುವ ಅಥಿತಿ ಉಪನ್ಯಾಸಕರ ನೇಮಕಾತಿಯಲ್ಲಿ ಮಾರ್ಕ್‌ಶೀಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವುದು ಬಿಟ್ಟು ಅಕ್ರಮ ಬಯಲಿಗೆಳೆದ ಏಷ್ಯಾನೆಟ್ ಮಲೆಯಾಳಂ ನ್ಯೂಸ್ ವರದಿಗಾರ್ತಿ ಅಖಿಲಾ ನಂದಕುಮಾರ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದಕ್ಕೆ ಹಲವು ರಾಜಕೀಯ ಮುಖಂಡರು ಹಾಗೂ ಪತ್ರಕರ್ತರ ಸಂಘಟನೆ  ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಘಟನೆ ಖಂಡಿಸಿ ಇಂದು ಪತ್ರಕರ್ತರು ಕೇರಳದಲ್ಲಿ ಪ್ರತಿಭಟನೆ ನಡೆಸಿದ್ದಾರೆ. 

ಎರ್ನಾಕುಲಂ ಮಹಾರಾಜಾ ಕಾಲೇಜಿನಲ್ಲಿ ನಡೆದಿರುವ ಅತಿಥಿ ಉಪನ್ಯಾಸಕರ ನೇಮಕ ಅಕ್ರಮ ಕುರಿತು ಏಷ್ಯಾನೆಟ್ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ಈ ವರದಿಗೆ ತೆರಳಿದ ವರದಿಗಾರ್ತಿ ಅಖಿಲಾ ನಂದಕುಮಾರ್, ಮಹಾರಾಜಾ ಕಾಲೇಜಿನ ಅಕ್ರಮಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ನೇರ ಪ್ರಸಾರದ ಮೂಲಕ ಕಾಲೇಜಿನ ಪ್ರಾಂಶುಪಾಲರ ಪ್ರತಿಕ್ರಿಯೆ ಜೊತೆಗೆ ಇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳ ಪ್ರತಿಕ್ರಿಯೆ ಪಡೆದಿದ್ದರು. ಈ ವೇಳೆ ಎಸ್ಎಫ್ಐ ಕಾರ್ಯದರ್ಶಿ ಆರ್ಶೂ ನಡೆಸಿರುವ ಮತ್ತೊಂದು ಅಕ್ರಮ ಬಯಲಿಗೆ ಬಂದಿದೆ. ಯಾವುದೇ ಪರೀಕ್ಷೆ ಬರೆಯದಿದ್ದರೂ ಅರ್ಶೂ ಅಂಕಪಟ್ಟಿಯಲ್ಲಿ ಎಲ್ಲಾ ವಿಷಯದಲ್ಲಿ ಪಾಸ್ ಎಂದು ನಮೂಜಿಸಲಾಗಿದೆ. ಈ ಅಕ್ರಮವೂ ಭಾರಿ ಸದ್ದು ಮಾಡಿತ್ತು. . ಆದರೆ ಸಿಪಿಐ ವಿದ್ಯಾರ್ಥಿ ಘಟಕವಾಗಿರುವ ಎಸ್ಎಫ್ಐ ವಿರುದ್ಧ ಸುದ್ದಿ ಮಾಡಿದ ಕಾರಣಕ್ಕೆ ವರದಿಗಾರ್ತಿ ಅಖಿಲಾ ನಂದಕುಮಾರ್ ವಿರುದ್ಧವೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದರ ವಿರುದ್ಧ ಬಿಜೆಪಿ ಆಕ್ರೋಶ ಹೊರಹಾಕಿದೆ.