ಅಬ್ಬರಿಸುತ್ತಿದೆ ಫೆಂಗಲ್ ಮೂರು ರಾಜ್ಯ ಕಂಗಾಲ್: ಡೆಡ್ಲಿ ಚಂಡಮಾರುತಗಳು ಸೃಷ್ಟಿಯಾಗೋದು ಹೇಗೆ..?

Dec 3, 2024, 3:41 PM IST

ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತ ಜೋರಾಗಿನೇ ಆರ್ಭಟಿಸುತ್ತಿದೆ. ಇದರ ಪರಿಣಾಮ ಪುದುಚೇರಿ ಸೇರಿದಂತೆ ಹಲವೆಡೆ ದಾಖಲೆ ಮಳೆಯಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಕೆಲವು ಕಡೆಗಳಲ್ಲಿ ಸೈಕ್ಲೋನ್ ಎಫೆಕ್ಟ್ ತಟ್ಟಿದೆ. ಕಳೆದ ನಾಲ್ಕೈದು ದಿನಗಳಿಂದ ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತ ದೊಡ್ಡ ಮಟ್ಟದಲ್ಲಿ ಆರ್ಭಟಿಸಿದೆ. ಮೊನ್ನೆಯಿಂದ ತಮಿಳುನಾಡಿನ ಕೆಲ ಜಿಲ್ಲೆಗಳು ಫೆಂಗಲ್‌ಗೆ ಕಂಪ್ಲೀಟ್ ಲಾಕ್ ಆಗಿವೆ. ಈ ಚಂಡಮಾರುತಗಳ ಸೃಷ್ಟಿ ಹೇಗೆ ಆಗುತ್ತೆ? ಇದಕ್ಕೆ ಕಾರಣವೇನು? ಸೈಕ್ಲೋನ್ ಕಾಣಿಸಿಕೊಳ್ಳುತ್ತಿದ್ದಂತೆ ಹೆಚ್ಚಿನ ಮಳೆಯಾಗುವುದೇಕೆ? ವಿಪರೀತ ಚಳಿಯಾಗುವುದೇಕೆ? ಚಂಡಮಾರುಗಳ ಪ್ರಭಾವ ಯಾವಾಗ ಹೆಚ್ಚಿರುತ್ತೆ ಮತ್ತು ಯಾವಾಗ ಕಡಿಮೆಯಾಗುತ್ತೆ? ಈ ಫೆಂಗಲ್ ಚಂಡಮಾರುತ ನಿನ್ನೆ ತಮಿಳುನಾಡಿನಲ್ಲಿ ಏನೆಲ್ಲ ಅವಾಂತರಗಳನ್ನು ಸೃಷ್ಟಿ ಮಾಡಿದೆ.  ಇದೆಲ್ಲವನ್ನು ನೋಡೋದೇ ಈ ಕ್ಷಣದ ವೀಶೇಷ ಸೈಕ್ಲೋನ್ ಸೃಷ್ಟಿ ರಹಸ್ಯ