ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ, ಪ್ರವಾಹಕ್ಕೆ 9600 ಮನೆಗಳು ಕುಸಿತ

Aug 16, 2023, 10:23 PM IST

ಡೆಹ್ರಾಡೂನ್‌ (ಆ.16): ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ ಅಕ್ಷರಶಃ ನರಕಸದೃಶ್ಯ ಸ್ಥಿತಿ ನಿರ್ಮಾಣ ಮಾಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗಿದೆ. ನೋಡನೋಡುತ್ತಿದ್ದಂತೆಯೇ ಮನೆಗಳು ಕುಸಿದು ಹೋಗಿವೆ. ಪ್ರವಾಹಕ್ಕೆ ಈವರೆಗೂ 9600 ಮನೆಗಳು ಕುಸಿತ ಕಂಡಿವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಶಿಮ್ಲಾದ ಸಮ್ಮರ್‌ ಹಿಲ್ಸ್‌ನಲ್ಲಿ ಭಾರೀ ಭೂಕುಸಿತವಾಗಿದೆ. ಸಂತ್ರಸ್ತರನ್ನು ಏರ್‌ಲಿಫ್ಟ್‌ ಮೂಲಕ ಸುರಕ್ಷಿತ ಸ್ಥಳಕ್ಕೆ ಶಿಫ್ಟ್‌ ಮಾಡಲಾಗಿದೆ. ಈವರೆಗೂ 60ಕ್ಕೂ ಅಧಿಕ ಜನರು ಸಾವು ಕಂಡಿದ್ದಾರೆ ಎನ್ನಲಾಗಿದೆ.

ದೇವಭೂಮಿಯಲ್ಲಿ ಜಲಪ್ರಳಯ: ಸಾವಿನ ಸಂಖ್ಯೆ 60ಕ್ಕೆ ಏರಿಕೆ