Dec 3, 2024, 1:03 PM IST
ಬೆಂಗಳೂರು(ಡಿ.03): ಭೀಕರ.. ಭಯಂಕರ.. ಕ್ಷಣ ಕ್ಷಣಕ್ಕೂ ಮಳೆಯ ಅವಾಂತರ ಹೆಚ್ಚಾಗ್ತಾ ಇದೆ. ಫೆಂಗಲ್ ಚಂಡಮಾರುತದ ಹೊಡೆತಕ್ಕೆ ನಾಲ್ಕು ರಾಜ್ಯಗಳೇ ಕಂಗೆಟ್ಟು ಕೂತಿದ್ದಾವೆ. ಕಳೆದ 24 ಗಂಟೆಗಳಲ್ಲೇ, ನರಕ ಸೃಷ್ಟಿಸಿರೋ ರಣಭೀಕರ ಮಳೆ, ಇನ್ನೂ 72 ಗಂಟೆಗಳ ಕಾಲ, ತನ್ನ ರೌದ್ರಾವತಾರ ಪ್ರದರ್ಶನ ಮಾಡಲಿದೆ. ಅದರ ಪ್ರಭಾವ ಏನಾಗಲಿದೆ ಅನ್ನೋದನ್ನ ಕಲ್ಪಿಸಿಕೊಂಡ್ರೆನೇ ಭಯವಾಗುತ್ತೆ. ಯಾಕಂದ್ರೆ, ಈಗ ಉಂಟಾಗಿರೋ ಅನಾಹುತವೇ ಅಷ್ಟು ಭೀಭತ್ಸವಾಗಿದೆ. ಒಂದೊಂದು ದೃಶ್ಯ ಕೂಡ ಉಸಿರು ಬಿಗಿಹಿಡಿಯೋ ಹಾಗೆ ಮಾಡುತ್ತೆ. ಆ ಅತಿ ಭಯಂಕರ ದೃಶ್ಯಗಳನ್ನ ನಾವೀಗ ನಿಮಗೆ ತೋರಿಸ್ತೀವಿ ನೋಡಿ.
ನೀವು ಇಷ್ಟು ಹೊತ್ತು ನೋಡಿದ್ದು, ರಣಮಳೆ ಸೃಷ್ಟಿಸಿರೋ ಅರ್ಧ ಅವಾಂತರ ಮಾತ್ರ. ನೋಡ್ಬೇಕಿರೋ ದಾರುಣ ಇನ್ನೂ ಸಾಕಷ್ಟಿದೆ. ಈ ಅತಿಭೀಕರ ಮಳೆ ಏನೇನು ದುರಂತಗಳಿಗೆ ಕಾರಣವಾಗಿದೆ ಅನ್ನೋದರ ಇನ್ನಷ್ಟು ದೃಶ್ಯಗಳನ್ನ ನಿಮಗೆ ತೋರಿಸ್ತೀವಿ.
ಫೆಂಗಲ್ ಆರ್ಭಟಕ್ಕೆ 30 ವರ್ಷದಲ್ಲೇ ದಾಖಲೆ ಮಳೆ:16 ಗಂಟೆ ವಿಮಾನ ಹಾರಾಟ ನಿಲ್ಲಿಸಿದ್ದ ಚೆನ್ನೈ ಏರ್ ಪೋರ್ಟ್
ಇದು ಅಂತಿಂಥಾ ಮಳೆ ಅಲ್ಲ. ರಾಕ್ಷಸ ಮಳೆ. ಈ ತನಕ ಇರೋ ಸುದ್ದಿ ಪ್ರಕಾರವೇ 20ಕ್ಕೂ ಅಧಿಕ ಬಲಿ ಪಡೆದಿದ್ಯಂತೆ ಈ ಮಳೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಅಂತಲೂ ಹೇಳ್ತಾ ಇದಾರೆ. ಅಷ್ಟಕ್ಕೂ ಈ ಪರಿ ರೋಷಾವೇಶ ಈ ಮಳೆಗೆ ಬಂದಿದ್ದಾದ್ರೂ ಯಾಕೆ? ಅದರ ರಿಪೋರ್ಟ್ ಇಲ್ಲಿದೆ ನೋಡಿ..
ಈ ಸೈಕ್ಲೋನ್ ಶುರುವಾದ 24 ಗಂಟೆಗಳಲ್ಲೇ, ವಿಧ್ವಂಸ ಅನ್ನೋ ಪದ ಯಾವ ರೂಪದಲ್ಲಿರುತ್ತೆ ಅನ್ನೋದು ಅರ್ಥವಾಗ್ತಾ ಇದೆ. ಅಂಥದ್ದರಲ್ಲಿ ಈ ಚಂಡಮಾರುತ ಮತ್ತಷ್ಟು ಹೆಚ್ಚಾದ್ರೆ ಪರಿಣಾಮ ಏನಾಗ್ಬೋದು?.
ಫೆಂಗಲ್ ಅನ್ನೋ ರಣರಕ್ಕಸ ಸೈಕ್ಲೋನ್ ಸುಳಿವು ಕೊಟ್ಟೇ ಬಂದಿತ್ತು. ಅಷ್ಟಾದ್ರೂ ಅದರಿಂದ ಉಂಟಾದ ಅಪಾಯದಿಂದ ಪಾರಾಗೋಕೆ ಸಾಧ್ಯವಾಗ್ತಾ ಇಲ್ಲ. ಅಷ್ಟಕ್ಕೂ ಈ ಮಹಾಮಳೆಗೆ ಕಾರಣ ಏನು? ಅದರ ಪರಿಣಾಮವೇನು?.