ಸದ್ಯಕ್ಕೆ ಇದು ಉತ್ತರ ಭಾರತವಲ್ಲ.. ಜಲ ಭಾರತ: ರಾಜಧಾನಿ ಸುತ್ತುವರಿದ ಯಮುನಾ..!

ಸದ್ಯಕ್ಕೆ ಇದು ಉತ್ತರ ಭಾರತವಲ್ಲ.. ಜಲ ಭಾರತ: ರಾಜಧಾನಿ ಸುತ್ತುವರಿದ ಯಮುನಾ..!

Published : Jul 11, 2023, 12:55 PM IST

ನಿರಂತರ ಮಳೆಗೆ ಉತ್ತರ ಭಾರತ ಅಕ್ಷರಶ ಸುಸ್ತು
ಸದ್ಯಕ್ಕೆ ಇದು ಉತ್ತರ ಭಾರತವಲ್ಲ.. ಜಲ ಭಾರತ 
ರಾಜಧಾನಿ ದೆಹಲಿಯಲ್ಲಿ 40 ವರ್ಷಗಳ ದಾಖಲೆ ಮಳೆ
 

ನಿರಂತರ ಮಳೆಗೆ ಉತ್ತರ ಭಾರತ ಅಕ್ಷರಶ ಸುಸ್ತಾಗಿದೆ. ಮಳೆ (Rain) ಬಿಟ್ಟು ಬಿಡದಂತೆ ಅಬ್ಬರಿಸುತ್ತಿದೆ. ಉತ್ತರ ಭಾರತ(North India) ಈಗ ಜಲಭಾರತವಾಗಿದೆ. ಕಂಡಲ್ಲೆಲ್ಲ ನೀರು. ಅದ್ರಲ್ಲೂ, ಪಂಚಾಬ್, ಹರಿಯಾಣ, ದೆಹಲಿ, ಹಿಮಾಚಲ ಪ್ರದೇಶ(Himachala pradesh) ಮತ್ತು ಉತ್ತರಾಖಂಡ ರಾಜ್ಯಗಳು ನಿರಂತರ ಮಳೆಗೆ ಅತ್ಯಂತ ಸಂಕಷ್ಟದ ಸುಳಿಗೆ ಸಿಲುಕಿವೆ. ಉತ್ತರ ಭಾತರದಲ್ಲಿ ಬಿಟ್ಟು ಬಿಡದಂತೆ ಮಳೆ ಸುರಿಯುತ್ತಿದೆ. ಕಳೆದ ಕೆಲ ದಿನಗಳಿಂಬಿ ಬಿಟ್ಟು ಬಿಡದಂತೆ ಮಳೆ ಸುರಿದ ಪರಿಣಾಮ, ಇಡೀ ಉತ್ತರ ಭಾರತ ಜಲದಿಗ್ಬಂಧನಕ್ಕೊಳಗಾಗಿದೆ. ಉತ್ತರ ಭಾರತದ ಐದು ರಾಜ್ಯಗಳಲ್ಲಿ  ಪರಿಸ್ಥಿತಿ ಹೇಗಾಗಿದೆ ಎಂದ್ರೆ, ನದಿ, ಹಳ್ಳಕೊಳ್ಳಗಳೆಲ್ಲ ಏಕಾಗಿವೆ. ಈ ರಾಜ್ಯಗಳಲ್ಲಿ ಅನೇಕ ಗ್ರಾಮಗಳು ದ್ವೀಪಗಳಾಗಿವೆ. ದೇಶದ ರಾಜಧಾನಿ ದೆಹಲಿ  ಸುತ್ತ ಮುತ್ತ ನಿರಂತರ ಮಳೆ ಸುರಿಯುತ್ತಿದೆ. ಇದರ ಪರಿಣಾಮ ಯಮುನಾ ನದಿ ದೊಡ್ಡ ಪ್ರಮಾಣದಲ್ಲಿ ಉಕ್ಕಿ ಹಿರಿಯುತ್ತಿದೆ. ರಾಜಧಾನಿ ದೆಹಲಿ ಜನರ ಜೀವನ ಸಂಕಷ್ಟದಲ್ಲಿ ಸಿಲುಕಿದೆ. ದೆಹಲಿಯ ರಸ್ತೆಗಳು, ಅಂಡರ್ಪಾಸ್ಗಳು, ಮಾರುಕಟ್ಟೆ ಮತ್ತು ಆಸ್ಪತ್ರೆಗಳಲ್ಲಿ ಪ್ರವಾಹ ತಾಂಡವವಾಡುತ್ತಿದೆ. 

ಇದನ್ನೂ ವೀಕ್ಷಿಸಿ:  ದಲಿತ ಹುಡುಗನ ಬೆಳವಣಿಗೆ ಸಹಿಸದೇ ಕೊಲೆ: ಚಕ್ರವರ್ತಿ ಸೂಲಿಬೆಲೆ

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more