ರಕ್ಷಣಾ ಉತ್ಪನ್ನಗಳ ಆಮದಿಗೆ ಬ್ರೇಕ್: ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ!

Aug 9, 2020, 1:37 PM IST

ನವದೆಹಲಿ(ಆ.09): ಮೊಬೈಲ್‌ ಆಪ್‌ಗಳನ್ನು ಬ್ಯಾನ್‌ ಮಾಡಿ ಬೆನ್ನಲ್ಲೇ 101 ಚೀನಾ ರಕ್ಷಣಾ ಸರಕುಗಳಿಗೆ ನಿರ್ಬಬಂಧ ಹೇರಿರುವ ಕೇಂದ್ರ ರಕ್ಷಣಾ ಇಲಾಖೆ, ಭಾರತದಲ್ಲೇ ಇವುಗಳನ್ನು ಉತ್ಪಾದಿಸುವ ಕುರಿತು ಮಹಹತ್ವದ ಘೋಷಣೆ ಮಾಡಿದೆ. 

ಈ ಸಂಬಂಧ ರಕ್ಷಣಾ ಸಚಿವವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿರುವ 101 ರಕ್ಷಣಾ ಸರಕುಗಳನ್ನು ಪಟ್ಟಿ ಮಾಡಿರುವ ಕೇಂದ್ರ ಸರ್ಕಾರ ಭಾರತದಲ್ಲೇ ಆ ರಕ್ಷಣಾ ಉತ್ಪನ್ನಗಳ ಉತ್ಪಾದನೆಗೆ ನಿರ್ಧರಿಸಿದೆ ಎಂಬುವುದನ್ನು ಸ್ಪಷ್ಟಪಡಿಸಿದ್ದಾರೆ. 

ಈ ಮೂಲಕ ಮುಂದಿನ 6ರಿಂದ 7 ವರ್ಷಗಳ ಕಾಲ ರಕ್ಷಣಾ ಇಲಾಖೆಯ 4 ಲಕ್ಷ ಕೋಟಿ ಕಾಂಟ್ರಾಕ್ಟ್​ ಅನ್ನು ಭಾರತೀಯ ಕಾರ್ಖಾನೆಗಳಿಗೆ ನೀಡಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ಚೀನಾ ಮೇಲಿನ ಅವಲಂಬನೆಯಿಂದ ಮುಕ್ತವಾಗಲು ಸರ್ಕಾರ ಮುಂದಾಗಿದೆ. ಚೀನಾದಿಂದ ಆಮದು ಮಾಡಿಕೊಳ್ಳಲಾಗುವ 1.30 ಲಕ್ಷ ರೂ. ರಕ್ಷಣಾ ಉತ್ಪನ್ನಗಳ ಬದಲಿಗೆ ಭಾರತದಲ್ಲೇ ಅವುಗಳನ್ನು ಉತ್ಪಾದನೆ ಮಾಡಲು ಸರ್ಕಾರ ನಿರ್ಧರಿಸಿದೆ.