Dec 17, 2024, 11:04 AM IST
ಬೆಂಗಳೂರು(ಡಿ.17): ಎಡ್ವಿನಾ ಮೌಂಟ್ ಬ್ಯಾಟನ್ಗೆ ನೆಹರು ಬರೆದ ಪತ್ರವನ್ನ ವಾಪಸ್ ಕೊಡಿ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಪ್ರಧಾನಿ ಪ್ರಧಾನಮಂತ್ರಿ ವಸ್ತು ಸಂಗ್ರಹಾಲಯ ಪತ್ರ ಬರೆದಿದೆ.
ಪ್ರಧಾನಿಗಳ ಸಂಗ್ರಹಾಲಯಕ್ಕೆ ಪತ್ರಗಳನ್ನು ವಾಪಸ್ ಕೊಡುವಂತೆ ಮನವಿ ಪ್ರಧಾನಮಂತ್ರಿ ವಸ್ತು ಸಂಗ್ರಹಾಲಯ ಮಾಡಿಕೊಂಡಿದೆ. ಏತನ್ಮಧ್ಯೆ ಎಡ್ವಿನಾಗೆ ಬರೆದ ಪತ್ರಗಳು ಸೋನಿಯಾ ಗಾಂಧಿ ಬಳಿ ಯಾಕಿವೆ ಎಂದು ಬಿಜೆಪಿ ಪ್ರಶ್ನೆ ಮಾಡಿದೆ. ಇದರಿಂದ ಕೆರಳಿದ ಕಾಂಗ್ರೆಸ್ ನೆಹರುಗೆ ಕಳಂಕ ಹಚ್ಚಲು ಬಿಜೆಪಿ ಯತ್ನ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಅಲ್ಲು ಅರ್ಜುನ್ ಸಪೋರ್ಟ್ಗೆ ನಿಂತ ಟಾಲಿವುಡ್ ಸ್ಟಾರ್ಸ್; ಎಲ್ಲಿಗೆ ಹೋಗಿ ತಲುಪಲಿದೆ ಪುಷ್ಪ vs ಸಿಎಂ ಫೈಟು?
ನೆಹರು-ಎಡ್ವಿನಾ ಪತ್ರಗಳನ್ನು ವಾಪಸ್ ಕೊಡಿ. 1971ರಲ್ಲಿ ನೆಹರು ಅವರ ಪತ್ರಗಳನ್ನು ಮ್ಯೂಸಿಯಂಗೆ ನೀಡಲಾಗಿತ್ತು. ಮ್ಯೂಸಿಯಂನಲ್ಲಿದ್ದ ಪತ್ರಗಳನ್ನು 2008ರಲ್ಲಿ ಸೋನಿಯಾ ಗಾಂಧಿ ವಾಪಸ್ ಪಡೆದಿದ್ದಾರೆ. ನೆಹರು ಅವರು ಎಡ್ವಿನಾ ಮೌಂಟ್ ಬ್ಯಾಟನ್ ಮತ್ತು ಇತರರಿಗೆ ಬರೆದ ಪತ್ರಗಳನ್ನ ಪ್ರಧಾನಮಂತ್ರಿಗಳ ಸಂಗ್ರಹಾಲಯಕ್ಕೆ ವಾಪಸ್ ಕೊಡಿ. ಐತಿಹಾಸಿಕ ದಾಖಲೆಗಳನ್ನು ಪ್ರಧಾನಮಂತ್ರಿಗಳ ಸಂಗ್ರಹಾಲಯದಲ್ಲಿ ಮುಂದಿನ ಪೀಳಿಗೆಗಾಗಿ ಇಡಬೇಕು ಎಂದು ಪ್ರಧಾನಮಂತ್ರಿ ವಸ್ತು ಸಂಗ್ರಹಾಲಯ ತಿಳಿಸಿದೆ.