Feb 17, 2024, 5:46 PM IST
ಪ್ರಧಾನಿ ನರೇಂದ್ರ ಮೋದಿಯನ್ನ ಮಣಿಸಬೇಕು ಅನ್ನೋ ಏಕಮಾತ್ರ ಉದ್ದೇಶದಿಂದ ಹುಟ್ಟಿಕೊಂಡಿದ್ದ ಇಂಡಿಯಾ ಒಕ್ಕೂಟ(INDIA Alliance) ದಿನೇ ದಿನೇ ಅಶಕ್ತವಾಗ್ತಾ ಇದೆ. ಒಕ್ಕೂಟದ ಸೃಷ್ಟಿಗೆ ಕಾರಣರಗಾಗಿದ್ದ ನಿತೀಶ್ ಕುಮಾರ್ , ಕಾಂಗ್ರೆಸ್(Congress) ಜೊತೆಗಿನ ಸಖ್ಯವನ್ನ ತೊರೆದು ಕಮಲ ಹಿಡಿದು ನಿಂತಿದ್ದಾರೆ. ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್ ನಂತರ ಫಾರೂಕ್ ಅಬ್ದುಲ್ಲಾ ಕೂಡ ಕಾಶ್ಮೀರದಲ್ಲಿ ಇಂಡಿ ಒಕ್ಕೂಟಕ್ಕೆ ಕೈ ಎತ್ತಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ(Loksabha) ಮೋದಿಯನ್ನ ಸೋಲಿಸಿ ಮಹಾಮೈತ್ರಿಕೂಟವನ್ನ ಅಧಿಕಾರಕ್ಕೆ ತರುವ ಉದ್ದೇಶದಿಂದ ಸೃಷ್ಟಿಯಾದ ಒಕ್ಕೂಟ ಇಂಡಿ ಅಲಾಯನ್ಸ್. ಕಾಂಗ್ರೆಸ್ , ಆಮ್ ಆದ್ಮಿ, ಟಿಎಂಸಿ, ಜೆಡಿಯು ಹೀಗೆ ದೇಶದ ಪ್ರಮುಖ ಪಕ್ಷಗಳೆಲ್ಲಾ ಸೇರಿ ಮಾಡಿಕೊಂಡಿದ್ದ ಮೈತ್ರಿಗೆ ಯಾರೋ ಮಾಟ ಮಾಡಿದಂತಿದೆ. ದಿನಕ್ಕೊಂದು ವಿಕೆಟ್ ಉದುರ್ತಾನೆ ಇದೆ. ಇಂಡಿ ಅಲಾಯನ್ಸ್ ಸೃಷ್ಟಿಗೆ ಮುಖ್ಯ ಕಾರಣರಾಗಿದ್ದ ನಿತೀಶ್ ಕುಮಾರ್ ಗಂಟು ಮೂಟೆ ಕಟ್ಟಿಕೊಂಡು ಹೋಗಿ ಬಿಜೆಪಿ(BJP) ಜೊತೆಗೆ ನಂಟು ಮಾಡಿಕೊಂಡಿದ್ದಾರೆ. ಅತ್ತ ಬಂಗಾಳದಲ್ಲಿ ದೀದಿ ನಾವೇ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡೋದು ಅನ್ನೋ ಮೂಲಕ ಕಾಂಗ್ರೆಸ್ಸಿಗೆ ಬಿಸಿ ತಾಗಿಸಿದ್ದಾರೆ..ಇತ್ತ ದೆಹಲಿ ಹಾಗೂ ಪಂಜಾಬಿನಲ್ಲಿ ಆಡಳಿತದಲ್ಲಿರೋ ಆಮ್ ಆದ್ಮಿ ಪಕ್ಷವೂ ಅದೇ ರಾಗವನ್ನ ಹಾಡಿದೆ.
ಇದನ್ನೂ ವೀಕ್ಷಿಸಿ: ಸುವರ್ಣ ಸಾಧಕರು ಪ್ರಶಸ್ತಿಗೆ ಭಾಜನರಾದ ವಿಜಯಪುರದ ಡಾ. ಶಿವಾನಂದ ಕೆಲೂರ್