ತಜ್ಞರ ಸಮಿತಿ ರಚಿಸದಿದ್ರೆ ಕೃಷಿ ಕಾಯ್ದೆಗೆ ತಡೆ; ಕೇಂದ್ರಕ್ಕೆ ಸುಪ್ರೀಂ ಎಚ್ಚರಿಕೆ

Jan 11, 2021, 3:40 PM IST

ನವದೆಹಲಿ (ಜ. 11): ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ರೈತರ ಪ್ರತಿಭಟನೆ ಮುಂದುವರೆದಿದೆ. ಕೇಂದ್ರದ ವಿರುದ್ಧ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. 

ಕೃಷಿ ಕಾಯ್ದೆ ಬಗ್ಗೆ ತಜ್ಞರ ಸಮಿತಿ ರಚಿಸಿ ಪರಿಶೀಲಿಸಿ. ರೈತರು, ಸರ್ಕಾರ ಸೂಕ್ತ ಒಪ್ಪಂದ ಮಾಡಿಕೊಳ್ಳಲಿ. ತಜ್ಞರ ಸಮಿತಿ ರಚಿಸದಿದ್ರೆ ಕಾಯ್ದೆಗೆ ತಡೆನೀಡಲಾಗುವುದು ಎಂದು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಎಚ್ಚರಿಸಿದೆ. ರೈತರು ದೆಹಲಿಗೆ ಬರುತ್ತಿರುವುದನ್ನು ತಡೆಯಲು ಸಾಧ್ಯವಿಲ್ಲ. ರೈತರ ಪ್ರತಿಭಟನೆ ವಿರುದ್ಧ ಆದೇಶ ನೀಡಲು ಸಾಧ್ಯವಿಲ್ಲ. ನೀವೇ ಕಾನೂನು ತಂದಿದ್ದೀರಿ. ನೀವೇ ಬಗೆಹರಿಸಿ' ಎಂದು ಸೂಚನೆ ನೀಡಿದೆ.