ಧರ್ಮ..ಸೈನ್ಯ..ಸಂವಿಧಾನ..ಚುನಾವಣೆಯಲ್ಲಿ ಮಾತನಾಡಬೇಡಿ..!ಬಿಜೆಪಿಗೂ, ಕಾಂಗ್ರೆಸ್‌ಗೆ ಖಡಕ್ ವಾರ್ಕಿಂಗ್..!

May 24, 2024, 4:21 PM IST


ಧರ್ಮ, ಸಂವಿಧಾನ, ಸೈನ್ಯ ಇದರ ಬಗ್ಗೆ ಚುನಾವಣೆಯಲ್ಲಿ ಮಾತನಾಡಬೇಡಿ ಎಂದು ಚುನಾವಣಾ ಆಯೋಗ(Election Commission) ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದೆ. ಸ್ಟಾರ್‌ ನಾಯಕರಿಗೆ ಬಿ ಕಂಟ್ರೋಲ್‌ ಎಂದು ಎಲೆಕ್ಷನ್‌ ಕಮಿಷನ್‌ ಹೇಳಿದೆ. ಏಪ್ರಿಲ್‌ನಲ್ಲೇ ನರೇಂದ್ರ ಮೋದಿ(Narendra Modi) ವಿರುದ್ಧ ಆಯೋಗಕ್ಕೆ ಕಾಂಗ್ರೆಸ್(Congress)‌ ದೂರನ್ನು ನೀಡಿತ್ತು. ರಾಜಸ್ಥಾನದ ಬನ್‍ಸ್ವಾರಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಧರ್ಮದ ವಿಚಾರವನ್ನು ಇಟ್ಟುಕೊಂಡು ಭಾಷಣ ಮಾಡಿದ್ರು ಎಂದು ಕಾಂಗ್ರೆಸ್‌ ಹೇಳಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ಮುಸ್ಲಿಮರಿಗೆ ಮರುಹಂಚಿಕೆ ಮಾಡಲಿದೆ ಎಂಬು ಬಿಜೆಪಿ(BJP) ಹೇಳಿತ್ತು. ಈ ಚುನಾವಣೆ, ಸಂವಿಧಾನದ ಚುನಾವಣೆಯಾಗಿದೆ. ಸಂವಿಧಾನ ರಕ್ಷಿಸುವ ಚುನಾವಣೆಯಾಗಿದೆ. ಇದು ಸಂವಿಧಾನ. ಇದನ್ನ ಮೋದಿ, ಬಿಜೆಪಿಯ ನಾಯಕರು, ಆರ್‍ಎಸ್‍ಎಸ್‍ನವರು ಮುಗಿಸಲು ಪ್ರಯತ್ನಿಸುತ್ತಿದ್ದಾರೆ. ಬದಲಿಸಲು ಯತ್ನಿಸುತ್ತಿದ್ದಾರೆ. ಒಂದ್ ಕಡೆ ಸಂವಿಧಾನ ಕೊನೆಗೊಳಿಸಲು ಹೊರಟಿದ್ರೆ, ಇನ್ನೊಂದು ಕಡೆ ಕಾಂಗ್ರೆಸ್ ಪಾರ್ಟಿ ಸಂವಿಧಾನವನ್ನು ಉಳಿಸಲು ಹೊರಟಿದೆ. ಈ 2024ರ ಚುನಾವಣೆ ಸಂವಿಧಾನ ರಕ್ಷಣೆಯ ಚುನಾವಣೆಯಾಗಿದೆ. 

ಇದನ್ನೂ ವೀಕ್ಷಿಸಿ:  ತಂಗಿಯ ಪ್ರೀತಿಗೆ ಅಣ್ಣನೇ ವಿಲನ್..! ಓದದೇ ಇದ್ದವನನ್ನ ಪ್ರೀತಿಸಿದ್ದೇ ತಪ್ಪಾಯ್ತು..!