May 22, 2024, 11:02 AM IST
ಬೆಂಗಳೂರು(ಮೇ.22): ಹೆಚ್ಚು ಹೆಚ್ಚು ಮತಗಳಿಂದ ಗೆಲ್ಲಬೇಕು ಅನ್ನೊ ಆಸೆಗೆ, ಮತದಾರರ ಕೈಗೆ ದುಡ್ಡು, ಮದ್ಯ ಕೊಡುತ್ತಿದ್ದವರು ಈಗ ಮಾದಕ ವಸ್ತುಗಳನ್ನ ಕೊಡ್ತಿದ್ದಾರೆ. ಅದರಲ್ಲೂ ಪಂಜಾಬ್ ಮತ್ತು ಗುಜರಾತ್‌ನಲ್ಲಿ ಆಯೋಗದವರ ಕೈಗೆ ಸಿಕ್ಕ ಡ್ರಗ್ಸ್ ಪ್ರಮಾಣ ಎಷ್ಟು ಅಂತ ಕೇಳ್ಬಿಟ್ರೆ ಶಾಕ್ ಆಗ್ಬಿಡ್ತಿರಾ..
ಎಲ್ಲವೂ ವೋಟ್‌ಗಾಗಿ ನಡೀತಾ ಇರೋ ಕಸರತ್ತು. ಇಷ್ಟು ದಿನ ನೋಟ್ ಮಾತ್ರ ಕೊಟ್ಟು ಮತಗಳನ್ನ ಕೇಳ್ತಿದ್ದವರು. ಈಗ ಕೈಗೆ ಡ್ರಗ್ಸ್ ಕೊಡ್ತಿದ್ದಾರೆ. ಹೀಗೆ ಜನರ ಕೈಗೆ ಡ್ರಗ್ಸ್ ಇಷ್ಟು ಸುಲಭವಾಗಿ ಸಿಗ್ತಾ ಇದ್ರೆ. ಪ್ರತಿಯೊಂದು ರಾಜ್ಯದ ಚಿತ್ರಣವೂ ಪಂಜಾಬ್‌ನಂತೆ ಆದರೂ ಅಚ್ಚರಿ ಏನಿಲ್ಲ.
ಎಣ್ಣೆ ಹೊಡೆದು ಡ್ರೈವ್ ಮಾಡೋ ಮುನ್ನ ಹುಷಾರ್..! ಆರ್‌ಟಿಒದಿಂದಲೂ ಇನ್ಮುಂದೆ ಡ್ರಿಂಕ್ ಅಂಡ್ ಡ್ರೈವ್ ಆಪರೇಷನ್!
ಕೆಲವು ಕಡೆಗಳಲ್ಲಿ ಅಧಿಕಾರಿಗಳು ರೇಡ್ ಮಾಡಿದಾಗ ಡ್ರಗ್ಸ್, ಆಲ್ಕೊಹಾಲ್ ಸಿಕ್ಕರೆ ಇನ್ನು ಕೆಲವು ಕಡೆಗಳಲ್ಲಿ ಅಂದಾಜಿಗೂ ಮೀರಿ ಗರಿಗರಿ ನೋಟಿನ ರಾಶಿ ಸಿಕ್ತಾ ಇದೆ. ಈ ಹಣಕ್ಕೂ ಚುನಾವಣೆಗೂ ಏನಾದರೂ ಕನೆಕ್ಷನ್ ಇದೆಯಾ?.
ಇದು ವೋಟ್ ಫಾರ್ ನೋಟಿನ ಝಮಾನಾ. ಇದೇ ಕಾರಣಕ್ಕೆ ಎಲೆಕ್ಷನ್ ಕಮಿಶನ್‌ನವರು ಮೊದಲೇ ಎಲ್ಲರ ಮೇಲೆ ಹದ್ದಿನಗಣ್ಣನ್ನ ಇಟ್ಟಿದ್ದರು. ಯಾರ ಯಾರ ಮೇಲೆ ಅನುಮಾನ ಬಂದಿದೆಯೋ ಅವರ ಮನೆ-ಕಚೇರಿ ಮೇಲೆ ದಾಳಿ ಮಾಡಿದೆ. ಇತ್ತಿಚೆಗೆ ವ್ಯಾಪಾರಿ ಒಬ್ಬರ ಮನೆ ಮೇಲೂ ದಾಳಿ ಮಾಡಿದ್ದರು. ಆಗ ಅವರ ಕಣ್ಣಿಗೆ ಕಾಣಿಸಿದ್ದು ಏನು ಗೊತ್ತಾ, ನೀವು ಒಮ್ಮೆ ನೋಡ್ಬಿಡಿ.