Yogi Adityanath: ಯೋಗಿಯ ನಯಾ ಉತ್ತರ ಪ್ರದೇಶ..! ರಕ್ತಸಿಕ್ತ ರಾಜ್ಯದಲ್ಲಿ ನಿರ್ಭೀತ ವಾತಾವರಣ..!

Yogi Adityanath: ಯೋಗಿಯ ನಯಾ ಉತ್ತರ ಪ್ರದೇಶ..! ರಕ್ತಸಿಕ್ತ ರಾಜ್ಯದಲ್ಲಿ ನಿರ್ಭೀತ ವಾತಾವರಣ..!

Published : Mar 31, 2024, 11:49 AM IST

ನುಡಿದಂತೆ ‘ಪುಡಿ’ ಮಾಡ್ತಿರೋ ಬುಲ್ಡೋಜರ್ ಬಾಬಾ..!
ಯೋಗಿ ಬಂದ ಮೇಲೆ ನಡೆದ ಎನ್‌ಕೌಂಟ್‌ಗಳು ಎಷ್ಟು ..?
ಖೈದಿಗಳು ಪೆರೋಲ್ ಬೇಡವೇ ಬೇಡ ಎನ್ನುತ್ತಿರೋದೇಕೆ..?

ಮಾಫಿಯಾವನ್ನ ಮಣ್ಣಲ್ಲಿ ಹೂತು ಹಾಕುತ್ತೇನೆ. ಇದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಅವರು ಸದನದಲ್ಲಿ ಅಬ್ಬರಿಸಿದ ಪರಿ. ನುಡಿದಂತೆ ನಡೆಯುತ್ತಿರೋ ಯೋಗಿ ಆದಿತ್ಯನಾಥ್ ಸರ್ಕಾರ ಡಾನ್‌ಗಳು ಎಂದು ಮೆರೆಯೋರ ಪಾಲಿಗೆ ಅಕ್ಷರಷಃ ಸಿಂಹಸ್ವಪ್ನವಾಗಿದೆ. ವಿಕಾಸ್ ದುಬೆ, ಅತೀಕ್ ಅಹ್ಮದ್, ಅನ್ಸಾರಿ ಇವರಿಗೆ ಯೋಗಿ ಅವಧಿಯಲ್ಲಿ ನರಕ ಸಿಕ್ಕಿದೆ. ಬಾಲ್ಯದಲ್ಲೇ ಸನ್ಯಾಸತ್ವ ಸ್ವೀಕಾರ ಮಾಡಿದ್ದ 26 ವರ್ಷದ ತರುಣ ಸಂತ ಲೋಕಸಭೆಗೆ(Lok Sabha) ಆಯ್ಕೆಯಾಗಿದ್ದ. ಮೀಸೆ ಬರದ ಗಡ್ಡವಿರದ ಹುಡುಗ ರಾಜಕಾರಣದಲ್ಲೇನು ಮಾಡಿಯಾನು ಅನ್ನೋದು ಸುತ್ತಮುತ್ತಲೂ ಇದ್ದವರ ಅಭಿಪ್ರಾಯವಾಗಿತ್ತು. ಆ ಹುಡುಗ ಇಡೀ ಭಾರತವೇ ತಿರುಗಿ ನೋಡುವಂತೆ ರಾಜ್ಯವನ್ನ ಆಳಬಹುದು ಅನ್ನೋ ಅಂದಾಜು ಯಾರಿಗೂ ಇರ್ಲಿಲ್ಲಾ. ಉತ್ತರ ಪ್ರದೇಶವೆನ್ನೋ(Uttar Pradesh) ಅತಿ ದೊಡ್ಡ ಹಾಗೂ ಅಪರಾಧದಲ್ಲೇ ಕುಖ್ಯಾತಿಯಾಗಿದ್ದ ರಾಜ್ಯದ ಮುಖ್ಯಮಂತ್ರಿಯಾಗಿ ಇಂದು ಯೋಗಿ ಮಾಡೆಲ್ ಅನ್ನೋದು ಜನಜನಿತವಾಗೋ ಹಾಗೇ ಮಾಡಿದ್ದಾನೆ ಅದೇ ಸಂತ. ಯೋಗಿ ಸಾಗಿ ಬಂದ ಹಾದಿ ಸುಲಭವಾಗಿತ್ತಾ.? ಖಂಡಿತಾ ಇಲ್ಲ.. ಸದನದಲ್ಲೇ ಅಸಹಾಯಕತೆಯಿಂದ ಕಣ್ಣಿರಿಟ್ಟಿದ್ದರು ಯೋಗಿ ಆದಿತ್ಯನಾಥ್. 2007ರಲ್ಲಿ ಯೋಗಿ ಆದಿತ್ಯನಾಥ್ ಗೋರಕ್ ಪುರದ(Gorakh Pur) ಸಂಸದರಾಗಿದ್ದ ಸಮಯವದು.ಆ ಸಮಯದಲ್ಲಿ ಸಮಾಜವಾದಿ ಪಕ್ಷದ ಅಧಿಕಾರವಿತ್ತು. ಮಾಫಿಯಾಗಳ ಮೇಲೆ ನಿಯಂತ್ರಣ ಸಾಧಿಸೋಕೆ ಸರ್ಕಾರ ಸಂಪೂರ್ಣ ವಿಫಲತೆಯನ್ನ ಕಂಡಿತ್ತು. ಅತೀಕ್ ಅಹ್ಮದ್ , ಮುಕ್ತಾರ್ ಅನ್ಸಾರಿಯಂತಹ ಗೂಂಡಾಗಳು ರಾಜಕಾರಣದಲ್ಲಿ ಇದ್ದರು.

ಇದನ್ನೂ ವೀಕ್ಷಿಸಿ: Watch Video: ಹೇಗಿದೆ ಕೋಲಾರ ಮತದಾರರ ಲೆಕ್ಕಾಚಾರ..? ಅಸೆಂಬ್ಲಿಯಲ್ಲಿನ ಹೊಂದಾಣಿಕೆ ಲೋಕಸಭೆ ಹೊತ್ತಿಗೆ ಮಾಯವಾಗಿದ್ದೇಕೆ?

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more