Dec 16, 2023, 11:37 PM IST
ನವದೆಹಲಿ (ಡಿ.16): 2024ರ ಲೋಕಸಭೆ ಚುನಾವಣೆಗಾಗಿ ಕಾಂಗ್ರೆಸ್ ಕ್ರೌಂಡ್ ಫಂಡಿಂಗ್ ಮಾಡಲು ಮುಂದಾಗಿದೆ. ಪಕ್ಷ ಬಲಪಡಿಸಲು ಕ್ರೌಡ್ ಫಂಡಿಂಗ್ ತಂತ್ರಗಾರಿಕೆ ಮಾಡುತ್ತಿದೆ. ಪ್ರತಿ ಬೂತ್‌ನಿಂದ ಕನಿಷ್ಠ 10 ಮನೆಗಳಿಂದ ದೇಣಿಗೆ ಸಂಗ್ರಹ ಗುರಿ ಇಡಲಾಗಿದೆ.
ಲೋಕಸಭೆ ಚುನಾವಣೆ ಖರ್ಚಿಗೆ ಈ ಹಣವನ್ನು ಉಪಯೋಗಿಸಿಕೊಳ್ಳಲಾಗುತ್ತದೆ ಎಂದು ಹೇಳಿದೆ. ಬಿಜೆಪಿಯ ವಿರುದ್ಧದ ಹೋರಾಟ ಮಾಡುತ್ತಿದ್ದೇವೆ ಅದಕ್ಕಾಗಿ ಹಣ ನೀಡುವಂತೆ ಜನರ ಬಳಿ ಕಾಂಗ್ರೆಸ್ ಹೋಗಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಇದಕ್ಕೆ ಚಾಲನೆ ನೀಡಿದರು.
ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕಮಲ್‌ನಾಥ್ ವಜಾ, ಜಿತು ಪತ್ವಾರಿ ಹೊಸ ಚೀಫ್
138, 1380 ಅಥವಾ 13080 ರೂಪಾಯಿ ಹಣವನ್ನು ಜನರು ನೀಡಬಹುದಾಗಿದೆ. ಪ್ರತಿ ಬೂತ್‌ನಲ್ಲಿ ಕನಿಷ್ಠ 10 ಮನೆಗಳಿಂದ ದೇಣಿಗೆ ಸಂಗ್ರಹ ಗುರಿ ಇರಿಸಿಕೊಳ್ಳಲಾಗಿದೆ. ಅದಲ್ಲದೆ, ವೆಬ್‌ಸೈಟ್ ಮೂಲಕವೂ ದೇಣಿಗೆ ನೀಡಬಹುದಾಗಿದೆ.