Dec 31, 2024, 11:23 AM IST
ಅಣ್ಣಾ ವಿವಿ ಬಲತ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಂಕೆ ಸರ್ಕಾರದ ವಿರುದ್ಧ ಆಕ್ರೋಶ ಹೆಚ್ಚಾಗಿದೆ. ಡಿಎಂಕೆ ಕಾರ್ಯಕರ್ತನ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದ್ದು, ಸರ್ಕಾರ ಆತನ ರಕ್ಷಣೆಗೆ ನಿಂತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.
ವಿವಿ ವಿದ್ಯಾರ್ಥಿಗಳು 'ನಮ್ಮ ಹೆಣ್ಮಕ್ಕಳನ್ನು ಉಳಿಸಿ' ಎಂಬ ಅಭಿಯಾನ ಆರಂಭಿಸಿದ್ದಾರೆ. ಪ್ರಕರಣಕ್ಕೆ ರಾಷ್ಟ್ರೀಯ ಮಹಿಳಾ ಆಯೋಗ ಹಾಗೂ ಮದ್ರಾಸ್ ಹೈಕೋರ್ಟ್ ಕೂಡಾ ಎಂಟ್ರಿ ಕೊಟ್ಟಿದೆ.