Dec 31, 2024, 3:46 PM IST
ಬೆಂಗಳೂರು (ಡಿ.31): ಭಾರತಕ್ಕೆ ಆಪತ್ತು ತಂದಿದೆ ಚೀನಾದ ಜಲ ಯುದ್ಧತಂತ್ರ. 11.37 ಲಕ್ಷ ಕೋಟಿ ಮೌಲ್ಯದ ಜಲಾಸ್ತ್ರ ಏನು ಮಾಡಲಿದೆ ಅನ್ನೋ ಕುತೂಹಲ ಭಾರತಕ್ಕಿದೆ. ಈ ಜಲಾಸ್ತ್ರ ಕ್ಷಾಮ ಸೃಷ್ಟಿಸುತ್ತೆ, ಪ್ರವಾಹ ತರಿಸುತ್ತೆ, ಅಂಥ ಆ ಭೀಕರ ಆಯುಧ ಇದಾಗಿದೆ.
ಸಪ್ತರಾಜ್ಯಗಳ ಜನಕ್ಕೆ ಈಗ ಜಲಕಂಟಕ ಶುರುವಾಗಿದೆ. ಡ್ರ್ಯಾಗನ್ ವಾಟರ್ ವಾರ್ ಭಾರತಕ್ಕೆ ದೊಂಡ ಆತಂಕ ನೀಡಬಹುದು ಎಂದು ಹೇಳಲಾಗಿದ್ದು, ಬ್ರಹ್ಮಪುತ್ರಾ ನದಿಗೆ ಚೀನಾ ಅಣ್ಣೆಕಟ್ಟು ಕಟ್ಟಲು ಮುಂದಾಗಿದೆ. ಇದು ಅಂತಿಂಥ ಡ್ಯಾಮ್ ಅಲ್ಲ, ವಿಶ್ವದ ಅತಿದೊಡ್ಡ ಡ್ಯಾಂ ಆಗಿರಲಿದೆ.
ಬ್ರಹ್ಮಪುತ್ರ ನದಿಗೆ ವಿಶ್ವದ ಅತಿ ದೊಡ್ಡ ಜಲವಿದ್ಯುತ್ ಅಣೆಕಟ್ಟು: ಭಾರೀ ಆತಂಕ
ಚೀನಾದ ಡ್ಯಾಮ್ ಬರೀ ಚೀನಾದ ಪ್ರಗತಿಗೋಸ್ಕರವೇ ನಿರ್ಮಾಣವಾಗುತ್ತಿಲ್ಲ. ಅದು ಹುಟ್ಟುತ್ತಿರೋದೇ ಬೇರೆ ದೇಶಗಳ ಅವನತಿಗೋಸ್ಕರ. ಘೋರ ದುರಂತವೊಂದಕ್ಕೆ ಮುನ್ನುಡಿ ಬರೆಯೋದಕ್ಕೋಸ್ಕರ.