
ಉಪರಾಷ್ಟ್ರಪತಿ ಚುನಾವಣೆಗೆ NDAಯಿಂದ ತಮಿಳುನಾಡಿನ ಸಿ.ಪಿ ರಾಧಾಕೃಷ್ಣನ್ ಕಣಕ್ಕಿಳಿದಿದ್ದಾರೆ. ಡಿಎಂಕೆಯಿಂದ ಸಂಸದ ತಿರುಚಿಶಿವ ಅವರ ಹೆಸರು ಪ್ರಸ್ತಾಪವಾಗಿದೆ.
ಉಪರಾಷ್ಟ್ರಪತಿ ಚುನಾವಣೆ ರಣಕಣ ರಂಗೇರಿದೆ. ಈಗಾಗಲೇ NDA ತಮಿಳುನಾಡಿನ ಸಿ.ಪಿ ರಾಧಾಕೃಷ್ಣನ್ರನ್ನ ಕಣಕ್ಕಿಳಿಸಿದ್ದಾರೆ. ಈ ಮೂಲಕ ತಮಿಳುನಾಡು ವಿಧಾನಸಭೆಗೆ ರಣವ್ಯೂಹವೇ ರೂಪಿಸಲಾಗಿದೆ. ಅದ್ರಲ್ಲೂ ಡಿಎಂಕೆಗೆ ಚೆಕ್ಮೆಟ್ ಇಟ್ಟಿದೆ. ಇತ್ತ ಇಂಡಿ ಒಕ್ಕೂಟ ಮಾತ್ರ ಅಭ್ಯರ್ಥಿ ಆಯ್ಕೆಗೆ ಕಸರತ್ತು ಮುಂದುವರೆಸಿದೆ. ನಿನ್ನೆ ನಡೆದ ಸಭೆಯಲ್ಲಿ ಉಪರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಒಮ್ಮತಕ್ಕೆ ಬಂದಿಲ್ಲ. ಆದ್ರಿಂದ ಇಂದು ಮತ್ತೆ 12:30ಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನಿವಾಸದಲ್ಲಿ ಮತ್ತೆ ಸಭೆ ಸೇರಲಿದ್ದಾರೆ. ಇತ್ತ ಬಿಜೆಪಿ ಕೊಟ್ಟ ಸ್ಟ್ರೋಕ್ಗೆ ಡಿಎಂಕೆ ಮಾಸ್ಟ್ರರ್ ಸ್ಟ್ರೋಕ್ ಕೊಡಲು ರಣತಂತ್ರ ರೂಪಿಸಿದೆ. ನಿನ್ನೆ ನಡೆದ ಸಭೆಯಲ್ಲಿ ಡಿಎಂಕೆಯಿಂದ ಸಂಸದ ತಿರುಚಿಶಿವಾ ಹೆಸರು ಪ್ರಸ್ತಾಪವಾಗಿದೆ. ಆದ್ರೆ, ಟಿಎಂಸಿ ಮಾತ್ರ ಒಪ್ಪಿಗೆ ನೀಡಿಲ್ಲ ಎನ್ನಲಾಗ್ತಿದೆ. ಆದ್ರಿಂದ ಇಂದು ಮತ್ತೆ ಸಭೆ ನಡೆಸುವ ಮೂಲಕ ಉಪರಾಷ್ಟ್ರಪತಿ ಅಭ್ಯರ್ಥಿ ಘೋಷಿಸಲಿದ್ದಾರೆ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಗೆಲ್ಲಲು ಸಂಸದರ ಬಲವಿಲ್ಲದಿದ್ದರೂ ಅಭ್ಯರ್ಥಿ ಕಣಕ್ಕಿಳಿಸುತ್ತಿದ್ದಾರೆ. ಅದ್ರಲ್ಲೂ ತಮಿಳುನಾಡು ಎಲೆಕ್ಷನ್ ಮೇಲೆ ಕಣ್ಣಿಟ್ಟಿರುವ ಡಿಎಂಕೆ ಮತ್ತು ಕಾಂಗ್ರೆಸ್ ಬಹುತೇಕ ಡಿಎಂಕೆಯಿಂದ ಸಂಸದ ತಿರುಚಿಶಿವಾ ಹೆಸರು ಫೈನಲ್ ಮಾಡಲಿದೆಯಂತೆ. ಆದ್ರಿಂದ ಈ ಬಾರಿ ಉಪರಾಷ್ಟ್ರಪತಿ ಎಲೆಕ್ಷನ್.. ತಮಿಳುನಾಡು V/S ತಮಿಳುನಾಡು ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.