News Hour: ಲಕ್ಷ್ಮೀ ಪೂಜೆ ದಿನವೇ ‘ಕೈ’ ಬ್ಲ್ಯಾಕ್ ಫ್ರೈಡೇ: ರಣಭೂಮಿಯಾದ ರಾಷ್ಟ್ರ ರಾಜಧಾನಿ ದೆಹಲಿ

Aug 5, 2022, 10:32 PM IST

ನವದೆಹಲಿ (ಆ. 05):  ದೇಶಾದ್ಯಾಂತ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಆದರೆ ರಾಷ್ಟ್ರರಾಜಧಾನಿ ಮಾತ್ರ ರಣರಂಗವಾಗಿ ಮಾರ್ಪಟ್ಟಿತ್ತು. ಮೋದಿ ಸರ್ಕಾರದ ವಿರುದ್ಧ ಘೋಷಣೆ, ಮಳೆಯಲ್ಲಿಯೇ ನಾಯಕರ ಧರಣಿ, ಪ್ರತಿಭಟನಾಕಾರರ ಮೇಲೆ ಜಲಫಿರಂಗಿ, ಕಾಂಗ್ರೆಸ್ ಬ್ಲಾಕ್ ಫ್ರೈಡೇ ಪ್ರತಿಭಟನೆಯಲ್ಲಿ ಕಂಡು ಬಂದ ದೃಶ್ಯಗಳು ದೇಶದಲ್ಲಿನ ನಿರುದ್ಯೋಗ,  ಜಿಎಸ್‌ಟಿ ಹೇರಿಕೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದಿದ್ರು.

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರು ಕೇಂದ್ರದ ವಿರುದ್ಧ ಸಿಡಿದೆದ್ದರು.  ಕಾಂಗ್ರೆಸ್ ನಾಯಕರೆಲ್ಲ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆಗೆ ಇಳಿದಿದ್ದು ವಿಶೇಷ. ಅದರಲ್ಲೂ ಸದಾ ಬಿಳಿ ಪಂಜೆಯುಟ್ಟು ಓಡಾಡುತ್ತಿದ್ದ ಮಲ್ಲಿಕಾರ್ಜುನ ಖರ್ಗೆ ಕೂಡ ಕಪ್ಪು ಕುರ್ತಾದಲ್ಲಿ ಕಾಣಿಸಿಕೊಂಡಿದ್ದು ವಿಶೇಷ.

ರಾಮಮಂದಿರಕ್ಕೆ ಶಿಲಾನ್ಯಾಸ ಮಾಡಿದ ದಿನದಂದೇ ಕಾಂಗ್ರೆಸ್‌ ಕಪ್ಪುಬಟ್ಟೆ ಧರಿಸಿದ್ದೇಕೆ?

ಇನ್ನು ಪ್ರತಿಭಟನೆಗೂ ಮುನ್ನ ಮಾತನಾಡಿದ ರಾಹುಲ್ ಗಾಂಧಿ ಹಿಟ್ಲರ್ ಕೂಡ ಚುನಾವಣೆಯನ್ನು ಗೆದ್ದಿದ್ದ ಎನ್ನುವ ಮೂಲಕ ಪ್ರಧಾನಿ ಮೋದಿಯನ್ನು ಸರ್ವಾಧಿಕಾರಿಗೆ ಹೋಲಿಸಿದರು.  ಹರಿಯಾಣದಲ್ಲಿಯೂ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಚಂಢಿಗಢದಲ್ಲಿ ನಡೆದ ಪ್ರೊಟೆಸ್ಟ್ ಹೈಡ್ರಾಮವೇ ನಡೆಯಿತು.

ಪೊಲೀಸರು ಜಲಫಿರಂಗಿ ಬಳಸಿ ಪ್ರತಿಭಟನಾಕಾರರನ್ನ ಚದುರಿಸಿದ್ರು. ರಾಜಸ್ಥಾನ, ಒಡಿಶಾ, ಜಮ್ಮವಿನಲ್ಲೂ ಕಾಂಗ್ರೆಸ್ ಬೀದಿಗಿಳಿದು ಪ್ರೊಟೆಸ್ಟ್ ಮಾಡಿತು. ಮೋದಿ ಸರ್ಕಾರದ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.