Oct 13, 2023, 12:38 PM IST
ಇಸ್ರೇಲ್ ಮತ್ತು ಹಮಾಸ್ ಯುದ್ಧ ಏಳನೇ ದಿನವೂ ಮುಂದುವರೆದಿದೆ. ಇದುವರೆಗೂ ಯುದ್ಧದಲ್ಲಿ 4 ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಗಾಜಾ ಪಟ್ಟಿ ಮೇಲೆ ಇಸ್ರೇಲ್ ಬಾಂಬ್ ದಾಳಿ ಮಾಡಿದ್ದು, ಹಮಾಸ್ ಉಗ್ರರು ಕಂಗೆಟ್ಟಿದ್ದಾರೆ. ಇನ್ನೂ ಅಲ್ಲಿರುವ ಭಾರತೀಯರನ್ನು ಕರೆ ತರಲು ಆಪರೇಷನ್ ಅಜಯ್‌ಯನ್ನ ಪ್ರಾರಂಭ ಮಾಡಲಾಗಿದೆ. ಈಗಾಗಲೇ 212 ಭಾರತೀಯರನ್ನು ಕರೆತರಲಾಗಿದೆ. ಭಾರತೀಯರನ್ನು ಯುದ್ಧ ಭೂಮಿಯಿಂದ ಕರೆತರುವುದು ಸವಾಲಿನ ಕೆಲಸವಾಗಿದೆ. ನಮ್ಮ ಸರ್ಕಾರ ಯಶಸ್ವಿಯಾಗಿ ಈ ಹಿಂದೆ ಕರೆತಂದಿದೆ. ನಮ್ಮ ಸರ್ಕಾರ ಎರಡೂ ರಾಷ್ಟ್ರಗಳ ಜೊತೆ ಉತ್ತಮ ಸಂಬಂಧವನ್ನು ಹೊಂದಿದೆ. ಇಲ್ಲಿ ವಿಶ್ವಸಂಸ್ಥೆ ಹಸ್ತಕ್ಷೇಪ ಮಾಡುವುದು ತುಂಬಾ ಮುಖ್ಯವಾಗಿದೆ ಎಂದು ಪ್ರೊ. ಚಂದ್ರಕಾಂತ್ ಯಾತನೂರು ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: ಇಸ್ರೇಲ್-ಪ್ಯಾಲೆಸ್ತೇನ್ ಯುದ್ಧ: ಈ ಬಗ್ಗೆ ಪ್ರೊ. ಚಂದ್ರಕಾಂತ್ ಯಾತನೂರು ಹೇಳೋದೇನು ?