Dec 26, 2023, 11:22 PM IST
ಬೆಂಗಳೂರು (ಡಿ.26): 2024ರ ಲೋಕಸಭಾ ಸಮರಕ್ಕೆ ನಾಲ್ಕೇ ತಿಂಗಳು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಹಾಗೂ ಹಿಂದಿ ರಾಜ್ಯಗಳಲ್ಲಿನ ಅಭೂತಪೂರ್ವ ಗೆಲುವಿನಿಂದಾಗಿ ಬಿಜೆಪಿ, ಕೇಂದ್ರದಲ್ಲಿ 3ನೇ ಬಾರಿ ಅಧಿಕಾರ ಹಿಡಿಯುತ್ತೇವೆ ಎಂಬ ಜೋಶ್‌ನಲ್ಲಿದೆ. ಈ ಬಾರಿ ಮೋದಿ ನಾಗಾಲೋಟಕ್ಕೆ ಬ್ರೇಕ್ ಹಾಕಲೇಬೇಕೆಂದು ಇಂಡಿಯಾ ಮೈತ್ರಿ ಒಂದಾಗಿದೆ.
ಈ ನಡುವೆ ಈಗ ಚುನಾವಣೆ ನಡೆದರೇ ಮೂರನೇ ಬಾರಿ ಎನ್‌ಡಿಎ ನೇತೃತ್ವದ ಸರ್ಕಾರ ಅಧಿಕಾರ ಹಿಡಿಯಲಿದೆ ಎಂದು ಸಿ ವೋಟರ್ ಚುನಾವಣಾ ಪೂರ್ವ ಸರ್ವೆದಲ್ಲಿ ಭವಿಷ್ಯ ನುಡಿದಿದೆ. ಸಮೀಕ್ಷೆಯ ಪ್ರಕಾರ ಈಗ ಚುನಾವಣೆ ನಡೆದರೆ, ಎನ್‌ಡಿಎ ಶೇ. 42ರಷ್ಟು ಮತಗಳನ್ನು ಗಳಿಕೆ ಮಾಡುವ ಮೂಲಕ 295 ರಿಂದ 335 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದ್ದರೆ, ಇಂಡಿಯಾ ಮೈತ್ರಿ ಶೇ. 38 ರಷ್ಟು ಮತ ಪಡೆದು 175 ರಿಂದ 205 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು ಎನ್ನಲಾಗಿದೆ.
News Hour: ಐಷಾರಾಮಿ ವಿಮಾನದಲ್ಲಿ ರಾಜ್ಯದ ಸಿಎಂ ಪ್ರಯಾಣ, ಬರದಿಂದ ರೈತ ನಿತ್ರಾಣ!
ಇನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ, ಬಿಜೆಪಿಯೇ ಗರಿಷ್ಠ ಸೀಟು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ. ರಾಜ್ಯದಲ್ಲಿ ಬಿಜೆಪಿ ಮೈತ್ರಿಗೆ 22-24 ಸ್ಥಾನ ಸಿಗಲಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಬಿಜೆಪಿ ಮೈತ್ರಿಕೂಟಕ್ಕೆ ಹೆಚ್ಚು ಸ್ಥಾನ ಎಂದು ಸಿ ವೋಟರ್ ಸರ್ವೆ ತಿಳಿಸಿದೆ.