ನಾಗಿಣಿ ಡಾನ್ಸ್ ಮಾಡುತ್ತಲೇ ಪರಸ್ಪರ ಯುವಕರ ಗುಂಪೊಂದು ಕಿತ್ತಾಡಿಕೊಂಡ ಘಟನೆ ನಡೆದಿದ್ದು,ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ಮದುವೆ ಸಮಾರಂಭವೊಂದರಲ್ಲಿ ಬ್ಯಾಂಡ್‌ಗಳ ವಾದನ ಕೇಳಿ ಬರುತ್ತಿದ್ದು,ಇದಕ್ಕೆ ತಕ್ಕನಾಗಿ ಹುಡುಗರಿಬ್ಬರು ನಾಗಿಣಿ ಡಾನ್ಸ್ ಮಾಡುತ್ತಿದ್ದರು. ಇವರಿಬ್ಬರು ಸ್ನೇಹಿತರಾಗಿದ್ದು, ನಾಗಿಣಿ ಡಾನ್ಸ್ ಮಾಡುತ್ತಾ ಮಾಡುತ್ತಾ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಮೊದಲಿಗೆ ಓರ್ವ ಯುವಕ ಡಾನ್ಸ್ ಮಾಡುತ್ತಲೇ ಇನೋರ್ವನಿಗೆ ಹಾವಿನಂತೆ ಕುಟುಕಿದ್ದು, ಇದರಿಂದ ಸಿಟ್ಟಿಗೆದ್ದ ಆತ ಮತ್ತೊಬ್ಬನಿಗೆ ಅದೇ ರೀತಿ ಕಟುಕಲು ಹೋಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.