‘ಸಂಕಲ್ಪ ಪತ್ರ’ ಹೆಸರಿನಲ್ಲಿ ಬಿಜೆಪಿಯ ಪ್ರಣಾಳಿಕೆ ಬಿಡುಗಡೆ: ವೃದ್ಧರಿಗೆ,ಮಹಿಳೆಯರಿಗೆ, ದೇಶಕ್ಕೆ ಮೋದಿ ಗ್ಯಾರಂಟಿ ಏನು..?

Apr 15, 2024, 5:54 PM IST

ಬಿಜೆಪಿ ಪ್ರಣಾಳಿಕೆಯನ್ನು ದೇಶ ಬಹು ನಿರೀಕ್ಷೆಯಿಂದ ಕಾಯುತ್ತಿತ್ತು. ಈಗಾಗ್ಲೇ ಕಾಂಗ್ರೆಸ್(Congress) ತನ್ನ ಪ್ರಣಾಳಿಕೆಯಲ್ಲಿ ಉಚಿತ ಗ್ಯಾರಂಟಿಗಳ ಮಳೆಯನ್ನೇ ಸುರಿಸಿದೆ. ಕಾಂಗ್ರೆಸ್‌ನ ಈ ಉಚಿತ ಘೊಷಣೆಗಳ ಜೊತೆ ಫೈಟ್ ಮಾಡಲು ಬಿಜೆಪಿ(BJP) ತನ್ನ ಪ್ರಣಾಳಿಯಲ್ಲಿ ಯಾವೆಲ್ಲ ಅಸ್ತ್ರಗಳನ್ನು ಹೊಂದಿರಲಿದೆ ಎಂಬ ಕುತೂಹಲದಿಂದ ಜನ ಕಾಯುತ್ತಿದ್ದರು. ಕೊನೆಗೂ ಬಿಜೆಪಿ ಸಂಕಲ್ಪ ಪತ್ರ(Sankalpa Patra) ಹೆಸರಿನಲ್ಲಿ ಪ್ರಣಾಳಿಕೆಯನ್ನು(BJP Manifesto) ಬಿಡುಗಡೆಗೊಳಿಸಿದೆ. ಕಾಂಗ್ರೆಸ್ ನ್ಯಾಯ ಪತ್ರ(Nyay patra) ಹೆಸರಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ಕಾಂಗ್ರೆಸ್‌ನ ಈ ಪ್ರಣಾಳಿಕೆಯಲ್ಲಿ ಬರಪೂರ ಉಚಿತ ಘೋಷಣೆಗಳೇ ಇವೆ. ಮಕ್ಕಳಿಂದ ವೃದ್ಧರವರೆಗೂ ಕಾಂಗ್ರೆಸ್ ಫ್ರೀ ಗ್ಯಾರಂಟಿ(Congress Guarantees) ಘೋಷಣೆ ಮಾಡಿದೆ. ಕರ್ನಾಟಕ ಮತ್ತು ತೆಲಂಗಾಣದಲ್ಲಿ ಗ್ಯಾರಂಟಿಗಳು ಯಶಸ್ವಿಯಾಗಿದ್ದರಿಂದ, ಕಾಂಗ್ರೆಸ್ ಅದೇ ಅಸ್ತ್ರವನ್ನು ಲೋಕಸಭಾ ಚುಣಾವಣೆಗೂ ವಿಸ್ತರಿಸಿತ್ತು. ಬಿಜೆಪಿ ಸಂಕಲ್ಪ ಪತ್ರ ಹೆಸರಿನಲ್ಲಿ ತನ್ನ ಪ್ರಣಾಳಿಕೆ ಬಿಡುಗಡೆಗೊಳಿಸಿದೆ. ಏಪ್ರಿಲ್ 14, ಅಂದ್ರೆ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಹುಟ್ಟು ಹಬ್ಬ. ಅಂಬೇಡ್ಕರ್ ಹುಟ್ಟು ಹಬ್ಬದ ದಿನದಂದೇ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ. 

ಇದನ್ನೂ ವೀಕ್ಷಿಸಿ:  ನಾಳೆ ಕಲಬುರಗಿಯಲ್ಲಿ ಬೆಂಬಲಿಗರ ಸಭೆ ಕರೆದ ಮಾಲೀಕಯ್ಯ ಗುತ್ತೇದಾರ: ಕಾಂಗ್ರೆಸ್ ಸೇರಿ ಖರ್ಗೆ ಅಳಿಯನ ಗೆಲುವಿಗೆ ಶ್ರಮ ಹಾಕ್ತಾರಾ ?