Mar 3, 2024, 10:26 AM IST
ನವದೆಹಲಿಯಲ್ಲಿ ಸಂಜೆ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ(BJP) ನಾಯಕರು, 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಘೋಷಣೆ ಮಾಡಿದ್ರು. 195 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಬಿಜೆಪಿ, ಇಬ್ಬರು ಮಾಜಿ ಸಿಎಂಗಳಿಗೆ ಅವಕಾಶ ನೀಡಿದೆ. ಪಟ್ಟಿಯಲ್ಲಿ 28 ಮಹಿಳೆಯರು, 47 ಯುವಕರು, 27 ಎಸ್ಸಿ ಹಾಗೂ 18 ಎಸ್ಟಿ ಹಾಗೂ 57 ಒಬಿಸಿ ಅಭ್ಯರ್ಥಿಗಳಿಗೆ ಟಿಕೆಟ್(Ticket) ನೀಡಿದ್ರೆ ಮೊದಲ ಪಟ್ಟಿಯಲ್ಲಿ ಒಟ್ಟು 34 ಕೇಂದ್ರ ಸಚಿವರ ಕ್ಷೇತ್ರಗಳನ್ನ ಘೋಷಣೆ ಮಾಡಿದೆ. ಮೊದಲ ಪಟ್ಟಿಯಲ್ಲಿ ಬಿಜೆಪಿ ಹಿಂದಿ ಭಾಷಿಕ ರಾಜ್ಯಗಳನ್ನ ಹೆಚ್ಚಾಗಿ ಟಾರ್ಗೆಟ್ ಮಾಡಿದ್ದು, ಕೇರಳ ಹಾಗೂ ತೆಲಂಗಾಣ ಹೊರತು ಪಡಿಸಿ ಉತ್ತರ ಭಾರತದ ಬಹುತೇಕ ರಾಜ್ಯಗಳ ಟಿಕೆಟ್ ಘೋಷಣೆ ಮಾಡಿದೆ.195 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಬಿಜೆಪಿ ಉತ್ತರ ಪ್ರದೇಶದ 51, ಪಶ್ಚಿಮ ಬಂಗಾಳದ 20, ಮಧ್ಯ ಪ್ರದೇಶ 24, ಗುಜರಾತ್ನ 15, ರಾಜಸ್ಥಾನ 15, ಕೇರಳ 12,ತೆಲಂಗಾಣ 9, ಅಸ್ಸಾಂ 11, ಜಾರ್ಖಂಡ್ 11, ಛತ್ತೀಸ್ಗಢ 11, ದೆಹಲಿ 5, ಜಮ್ಮುಕಾಶ್ಮೀರ 2, ಉತ್ತರಾಖಂಡ್ 2, ಅರುಣಾಚಲ ಪ್ರದೇಶ 2, ಗೋವಾ 1, ತ್ರಿಪುರಾ 1, ಅಂಡಮಾನ್1, ದಿಯು ದಮನ್ 1 ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಿದೆ. ಬಿಜೆಪಿ ತನ್ನ ಮೊದಲ ಪಟ್ಟಿಯಲ್ಲಿ ಘಟಾನುಘಟಿ ನಾಯಕರಿಗೆ ಟಿಕೆಟ್ ಘೋಷಣೆ ಮಾಡಿದ್ದು, ಪ್ರಧಾನಿ ಮೋದಿ(Narendra Modi) ನಿರೀಕ್ಷೆಯಂತೆ ವಾರಾಣಸಿಯಿಂದ ಕಣಕ್ಕೆ ಇಳಿಯಲಿದ್ದಾರೆ. ರಾಜನಾಥ್ ಸಿಂಗ್ ಲಖನೌ ಹಾಗೂ ಅಮಿತ್ ಶಾ ಗಾಂಧಿನಗರದಿಂದ ಸ್ಪರ್ಧೆ ಮಾಡಲಿದ್ದಾರೆ. ಇನ್ನೂ ಪಟ್ಟಿಯಲ್ಲಿ ಇಬ್ಬರು ಮಾಜಿ ಸಿಎಂಗಳಿಗೂ ಬಿಜೆಪಿ ಸ್ಥಾನ ನೀಡಿದೆ.
ಇದನ್ನೂ ವೀಕ್ಷಿಸಿ: Anant Ambani Wedding: ಸಾಮಾನ್ಯರಿಗೂ ಆತಿಥ್ಯ ನೀಡಿದ ಕುಬೇರ..! ಜಾಮ್‌ನಗರದಲ್ಲಿ 145 ವಿಮಾನಗಳು ಲ್ಯಾಂಡ್..!