ಕಾಶ್ಮೀರ ಭಾರತದ ಭಾಗವಲ್ಲ ಎನ್ನುತ್ತಿದ್ದ ಜಾರ್ಜ್ ಸೊರೊಸ್ ಜೊತೆ ಸೋನಿಯಾ ಆತ್ಮೀಯತೆ?

Dec 11, 2024, 3:51 PM IST

ಕಾಂಗ್ರೆಸ್‌ನ ಅದಾನಿ ಆರೋಪಕ್ಕೆ ಬಿಜೆಪಿ ಜಾರ್ಜ್ ಸೊರೊಸ್ ಅವರ ಹೆಸರು ತೆಗೆದು ಪ್ರತ್ಯಾರೋಪ ಮಾಡಿದ್ದು, ಸಂಸತ್‌ನಲ್ಲಿ ಭಾರಿ ಗಲಾಟೆ ನಡೆಯುತ್ತಿದೆ. ಜಾರ್ಜ್​ ಸೋರೋಸ್ ಹಣ ಕಂಪನಿಗೆ ಸೋನಿಯಾ ಕೂಡ ಸಹ ಅಧ್ಯಕ್ಷೆ ಆಗಿದ್ದಾರಾ? ಈ ಬಗ್ಗೆ ಬಿಜೆಪಿ ದಾಖಲೆ ಸಮೇತ ಗಂಭೀರ ಆರೋಪ ಮಾಡಿದೆ. ಇದರಿಂದ ಸಂಸತ್​ನಲ್ಲಿ ಭಾರಿ ಗಲಾಟೆ ನಡೆದಿದೆ. ಜಾರ್ಜ್ ಸೊರೊಸ್ ಹಣ ನೀಡುವ ಪೋರಂ ಆಫ್ ಡಿ ಡೆಮಾಕ್ರೆಟಿಕ್​ ಲೀಡರ್ಸ್​ ಇನ್ ಏಷ್ಯಾ ಫೆಸಿಫಿಕ್(ಎಫ್​ಡಿಎ- ಎಪಿ) ಸಂಸ್ಥೆಗೆ ಸೋನಿಯಾ ಸಹ ಅಧ್ಯಕ್ಷೆಯಾಗಿದ್ದಾರೆ. ಕಾಶ್ಮೀರ ಭಾರತದ ಭಾಗವಲ್ಲ ಎಂಬುದು ಫೋರಮ್ ಆಫ್ ಡೆಮಾಕ್ರೆಟಿಕ್ ಲೀಡರ್ಸ್ ನಿಲುವಾಗಿದೆ. ಕಾಶ್ಮೀರವನ್ನೂ ಪ್ರತ್ಯೇಕ ರಾಷ್ಟ್ರವಾಗಿ ಪರಿಗಣಿಸಬೇಕು ಎಂಬ ನಿಲುವು ಎಫ್​ಡಿಎ-ಎಪಿ ಸಂಸ್ಥೆಯದ್ದು, ಹೀಗಾಗಿ ಜಾರ್ಜ್ ಸೋರೋಸ್​ ಹಾಗೂ ಕಾಂಗ್ರೆಸ್​ ನಡುವಿನ ಸಂಪರ್ಕ ಚರ್ಚೆಗೆ ಎನ್​ಡಿಎ ಪಟ್ಟು ಹಿಡಿದಿದೆ. ಕಾಂಗ್ರೆಸ್​ ನಾಯಕರ ಅದಾನಿ ಪ್ರತಿಭಟನೆಗೆ ಎನ್​ಡಿಎ ಮೈತ್ರಿ ಈ ಮೂಲಕ ತಿರುಗೇಟು ನೀಡಿದೆ.