Jan 8, 2023, 9:37 PM IST
1905 ರಲ್ಲಿ ರೂಪಿಸಲಾದ ಆಲ್ಬರ್ಟ್ ಐನ್‌ಸ್ಟೈನ್ ಅವರ ಸಾಪೇಕ್ಷತಾ ಸಿದ್ಧಾಂತವು ಇಂದು ಮೂಲಭೂತ ಭೌತಶಾಸ್ತ್ರದ ಆಧಾರವಾಗಿದೆ. ಆದರೆ, ಇದು ಸರಿಯಲ್ಲವೆಂದು ಭಾರತೀಯ ವಿಜ್ಞಾನಿಯೊಬ್ಬರು ಹೊಸ ಸಿದ್ಧಾಂತ ಮಂಡಿಸಿದ್ದಾರೆ. ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನ (ಟಿಐಎಫ್‌ಆರ್) ಪ್ರೊಫೆಸರ್ ಸಿ.ಎಸ್ ಉನ್ನಿಕೃಷ್ಣನ್ ಅವರು ಏಷ್ಯಾನೆಟ್ ನ್ಯೂಸ್ ಡೈಲಾಗ್ಸ್‌ನ ಈ ವಿಶೇಷ ಸಂಚಿಕೆಯಲ್ಲಿ ತಮ್ಮ ಕಾಸ್ಮಿಕ್ ರಿಲೇಟಿವಿಟಿಯ ಸಿದ್ಧಾಂತವನ್ನು ವಿವರಿಸಿದ್ದಾರೆ. ಐನ್‌ಸ್ಟೈನ್‌ನ ಸಂಪೂರ್ಣ ಸಿದ್ಧಾಂತವು ಸರಿಯಾಗಿಲ್ಲ ಮತ್ತು ಅದನ್ನು ವಿಭಿನ್ನ ಸಿದ್ಧಾಂತದಿಂದ ಬದಲಾಯಿಸಬೇಕಾಗಿದೆ ಎಂದು ಪ್ರೊಫೆಸರ್ ಸಿ.ಎಸ್. ಉನ್ನಿಕೃಷ್ಣನ್ ಹೇಳಿದರು.