ಧರ್ಮ ವಿರೋಧಿ ನೀತಿಯ ಬಗ್ಗೆ I.N.D.I.A ಮೈತ್ರಿಕೂಟದ ನಿಲುವೇನು..?

Sep 5, 2023, 12:51 PM IST

ಸನಾತನ ಧರ್ಮವನ್ನು ವಿರೋಧಿಸೋದಷ್ಟೇ ಅಲ್ಲ, ಸಂಪೂರ್ಣ ನಿರ್ಮೂಲನೆ ಮಾಡ್ಬೇಕಂತೆ. ಹೀಗಂತ ತಮಿಳುನಾಡು ಮುಖ್ಯಮಂತ್ರಿಯ ಮಗ, ಡಿಎಂಕೆ ನಾಯಕನ ಉದಯನಿಧಿ(Udhayanidhi Stalin) ಹೇಳಿದ್ದಾರೆ. ಇಂಡಿಯನ್ ನ್ಯಾಷನಲ್ ಡೆಮಾಕ್ರಟಿಕ್ ಇನ್'ಕ್ಲೂಸಿವ್ ಅಲಯನ್ಸ್. ಅಂದ್ರೆ ಭಾರತೀಯ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಳಗೊಳ್ಳುವಿಕೆಯ ಒಕ್ಕೂಟ. ಹೀಗಂತ ಜಬರ್ದಸ್ತ್ ಹೆಸರಿಟ್ಟುಕೊಂಡು ಮೋದಿ(Narendra modi) ವಿರುದ್ಧ ಯುದ್ಧ ಸಾರಿರೋ ಇಂಡಿಯಾ ಮೈತ್ರಿಕೂಟಕ್ಕೀಗ ಧರ್ಮಸಂಕಟದ ಸಂಕಷ್ಟ. ಇಂಡಿಯಾ(I.N.D.I.A.) ಒಕ್ಕೂಟದಲ್ಲಿರೋ ಒಂದೊಂದೇ ಪಕ್ಷಗಳು ಹಿಂದೂ ಧರ್ಮ ವಿರೋಧಿ ಹೇಳಿಕೆಗಳನ್ನು ಕೊಡ್ತಾ ಇವೆ. ಒಬ್ಬೊಬ್ಬರದ್ದು ಒಂದೊಂದು ಹೇಳಿಕೆ, ಒಂದೊಂದು ವಿವಾದ. ಲೋಕಸಭಾ ಚುನಾವಣೆ ಹತ್ತಿರ ಬರ್ತಾ ಇದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರ್ತಾ ಇರೋದು ನಿಮ್ಗೆ ಗೊತ್ತೇ ಇದೆ. ಪ್ರಧಾನಿ ಮೋದಿಯವರ ಹ್ಯಾಟ್ರಿಕ್ ದಿಗ್ವಿಜಯಕ್ಕೆ ಬ್ರೇಕ್ ಹಾಕಲೇಬೇಕು ಅಂತ ಹೊರಟಿರೋ ವಿರೋಧ ಪಕ್ಷಗಳು, ಇಂಡಿಯಾ ಹೆಸರಲ್ಲಿ ಮೈತ್ರಿಕೂಟವನ್ನು ರಚಿಸಿ ಮೋದಿ ವಿರುದ್ಧ ರಣಕಹಳೆ ಮೊಳಗಿಸಿ ಬಿಟ್ಟಿವೆ. ಕಾಂಗ್ರೆಸ್, ಟಿಎಂಸಿ, ಎನ್'ಸಿಪಿ, ಆರ್'ಜೆಡಿ, ಜೆಡಿಯು, ಆಮ್ ಆದ್ಮಿ ಪಾರ್ಟಿ ಸೇರಿದಂತೆ ಇಂಡಿಯಾ ಮೈತ್ರಿಕೂಟದಲ್ಲಿ 25ಕ್ಕೂ ಹೆಚ್ಚು ಪಕ್ಷಗಳಿದ್ದಾವೆ. ಒಂದೊಂದು ದಾರಿಯಲ್ಲಿದ್ದ ಪಕ್ಷಗಳೆಲ್ಲಾ ಮೈತ್ರಿಕೂಟದ ಹೆಸರಲ್ಲಿ ಒಂದಾಗಿವೆ ನಿಜ. ಆದ್ರೆ ಹುಟ್ಟುಗುಣ ಸುಟ್ರೂ ಹೋಗಲ್ಲ ಅನ್ನೋ ಮಾತೇ ಇದ್ಯಲ್ಲಾ.. ಆ ಮಾತಿಗೆ ತಕ್ಕಂತೆ ಮೈತ್ರಿಕೂಟದ ಪಕ್ಷಗಳು ನಡೆದು ಕೊಳ್ತಾ ಇವೆ. ಹಿಂದೂ ಧರ್ಮಕ್ಕೆ ಅವಮಾನ ಮಾಡುವಂಥಾ ಹೇಳಿಕೆಗಳನ್ನು ಒಬ್ಬೊಬ್ಬರೇ ನೀಡ್ತಾ ಇದ್ದಾರೆ. 

ಇದನ್ನೂ ವೀಕ್ಷಿಸಿ:  ಮಿತಿಮೀರಿದ ಅಧಿಕಾರಿಯ ಆಟಾಟೋಪ ! ಭುಜದ ಮೇಲೆ IPS ಲೋಗೋ, ಕೈಯಲ್ಲಿ ರೇಜರ್..!