Feb 2, 2022, 6:22 PM IST
ಬೆಂಗಳೂರು (ಫೆ. 2): ವಿಶ್ವದಲ್ಲಿ ಕ್ರಿಪ್ಟೋ ಕರೆನ್ಸಿಗಳಾದ ಬಿಟ್ ಕಾಯಿನ್ (Bitcoin), ಡಾಗ್ ಕಾಯಿನ್ ಗಳು (DogCoin) ತನ್ನ ಜಾಲವನ್ನು ವಿಸ್ತರಿಸುತ್ತಿರುವಾಗಲೇ ಭಾರತವು ತನ್ನದೇ ಆದ ಡಿಜಿಟಲ್ ಕರೆನ್ಸಿಯನ್ನು (Digital Currency) ಘೋಷಣೆ ಮಾಡಿದೆ. ಪ್ರಸ್ತುತ ಡಿಜಿಟಲ್ ರುಪೀ (Digital Rupee) ಎನ್ನುವ ಸಣ್ಣ ಹೆಸರಿನಿಂದ ಗುರುತಿಸಿಕೊಂಡಿರುವ ಡಿಜಿಟಲ್ ಕರೆನ್ಸಿ ಘೋಷಣೆ ಮಾಡುವ ಮಾಡುವ ಕ್ರಾಂತಿಕಾರಕ ಹೆಜ್ಜೆಯನ್ನು ಕೇಂದ್ರ ಸರ್ಕಾರ ಇರಿಸಿದೆ. ಇನ್ನು ಕೆಲವೇ ತಿಂಗಳಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಡಿಜಿಟಲ್ ಕರೆನ್ಸಿಯನ್ನು ಬಿಡುಗಡೆ ಮಾಡಲಿದೆ.
Budget 2022: ಬ್ಲಾಕ್‌ಚೈನ್ ಬಳಸಿ RBI ಡಿಜಿಟಲ್ ಕರೆನ್ಸಿ: ಡಿಜಿಟಲ್ ಸ್ವತ್ತು ಆದಾಯದ ಮೇಲೆ ತೆರಿಗೆ!
ಭಾರತದ್ದೇ ಆದ ಸ್ವಂತ ಕ್ರಿಪ್ಟೋ ಕರೆನ್ಸಿ (Cryptocurrenc) ಎಂದು ಇದನ್ನು ಹೇಳಬಹುದಾದರೂ. ಡಿಜಿಟಲ್ ಕರೆನ್ಸಿ ಬಗ್ಗೆ ಇನ್ನಷ್ಟೇ ಮಾಹಿತಿಗಳು ಬರಬೇಕಿದೆ. ಹಾಗಿದ್ದಲ್ಲಿ,ಭೌತಿಕ ದುಡ್ಡಿಗೂ ಡಿಜಿಟಲ್ ದುಡ್ಡಿಗೂ ಇರುವ ವ್ಯತ್ಯಾಸವೇನು? ಸರ್ಕಾರಕ್ಕೆ ಈ ಡಿಜಿಟಲ್ ಕರೆನ್ಸಿಯ ಅಗತ್ಯವಾದರೂ ಏನು? ಸಾಮಾನ್ಯ ಜನರೂ ಇದನ್ನು ಬಳಕೆ ಮಾಡಬಹುದೇ? ಎನ್ನುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.