ವಿಷಬಾಂಬ್ ಬ್ಲಾಸ್ಟ್ ಹಿಂದಿದೆಯಾ ದೆಹಲಿ ರೈತರ ಪಾಲು..? ಬೆಂಗಳೂರಿನಲ್ಲೂ ಏರ್ ಪಾಯ್ಸನ್ ಬಾಂಬ್ ಬ್ಲಾಸ್ಟ್..!

Nov 6, 2023, 9:17 AM IST

ದೆಹಲಿ.. ಭಾರತದ(India) ರಾಜಧಾನಿ ಮಾತ್ರವಲ್ಲ, ಈ ಪ್ರದೇಶ ಅನೇಕ ಪ್ರಾಚೀನ ಸ್ಮಾರಕಗಳ ನೆಲೆಯಾಗಿದೆ ಕೂಡ. ಅವುಗಳಲ್ಲಿ ಕೋಟೆಗಳು, ಮಸೀದಿಗಳು, ದೇವಾಲಯಗಳು ಮುಂತಾದವು ಸೇರಿವೆ. ಈ ಅದ್ಭುತ ಸ್ಮಾರಕಗಳು ಸುಂದರ ಹಾಗೂ ಬೆರಗುಗೊಳಿಸುವಂತಿದೆ ಅನ್ನುವುದರಲ್ಲಿ ಎರಡು ಮಾತೇ ಇಲ್ಲ. ದೆಹಲಿಯಲ್ಲಿ(Delhi) ನೋಡಬೇಕಾದದ್ದು ತುಂಬಾ ಇದೆ. ಕಣ್ತುಂಬಿಕೊಳ್ಳಬೇಕಾದದ್ದು ಸಾಕಷ್ಟಿದೆ. ಆಕರ್ಷಕವಾದ ಮನಮೋಹಕವಾದ ಪ್ರದೇಶ ದೆಹಲಿ.  ಐತಿಹಾಸಿಕ ಮಹತ್ವದ ಜೊತೆಗೆ ರಾಜಕೀಯ ಮಹತ್ವವನ್ನೂ ಒಗ್ಗೂಡಿಸಿಕೊಂಡಿರೋ ಅತ್ಯದ್ಭುತ ತಾಣ ಈ ದೆಹಲಿ. ಇದೇ ಕಾರಣಕ್ಕೆ, ಬಹುತೇಕರು ದೆಹಲಿಯಲ್ಲೇ ಇರೋದಕ್ಕೆ ಇಷ್ಟ ಪಡ್ತಾರೆ. ದೇಶ ವಿದೇಶಗಳ ಜನರನ್ನ, ಕೈ ಬೀಸಿ ಕರೆಯುತ್ತಿದೆ ದೆಹಲಿ. ಜನ ಸಮೂಹ ಹೆಚ್ಚಾದಂತೆ, ಬೃಹದಾಕಾರವಾಗಿ ಬೆಳೀತಾ ಇದೆ ರಾಷ್ಟ್ರ ರಾಜಧಾನಿ. ಕೆಲವೇ ಕೆಲವು ವರುಷಗಳ ಹಿಂದೆ, ಈ ಪ್ರವಾಸಿ ತಾಣಗಳನ್ನ ನೋಡಲು ದೂರದೂರಿನಿಂದ ಪ್ರವಾಸಿಗರು ಲಕ್ಷಾಂತರ ಸಂಖ್ಯೆಯಲ್ಲಿ ದೆಹಲಿಗೆ ಬರುತ್ತಿದ್ದರು. ಆದರೆ ಈಗ ಇದೇ ದೆಹಲಿಗೆ ಬರೋದಕ್ಕೆ ಜನ ಹಿಂದೇಟು ಹಾಕ್ತಿದ್ದಾರೆ. ಕಾರಣ ಈಗ ದೆಹಲಿಗೆ ಬಂದರೆ ಸಾವೇ ಫಿಕ್ಸ್ ಅನ್ನೊ ಭಯ ಅವರಿಗೆಲ್ಲ ಕಾಡ್ತಿದೆ. ದೆಹಲಿ ಈಗ ಸಾವಿನ ಕೂಪ ಅನ್ನೊ ಭಾವ ಎಲ್ಲರಿಗೂ ಕಾಡ್ತಿದೆ. ಇದೇ ಕಾರಣಕ್ಕೆ ಈಗ ದೆಹಲಿಗೆ ಬರೋ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಕಡಿಮೆ ಆಗ್ತಿದೆ. ಅಷ್ಟೆ ಅಲ್ಲ ಈಗ ದೆಹಲಿಗೆ ಬಂದು ನಿರಾಳವಾಗಿ ಉಸಿರಾಡ್ತೇನೆ ಅಂದರೂ ಕೂಡ ಸಾವು ತಪ್ಪಿದ್ದಲ್ಲ. ಈ ಪ್ರದೇಶ ಅಷ್ಟು ಭಯಾನಕ ಪ್ರದೇಶವಾಗಿ ಬದಲಾಗ್ಹೋಗಿದೆ..  ಅಷ್ಟಕ್ಕೂ ಇಲ್ಲಿ ಅಂಥಹದ್ದು ಏನಾಗ್ತಿದೆ ಅಂತಿರಾ.. ಅಲ್ಲಿ ಪ್ರತಿವರ್ಷ ಛಳಿಗಾಲ ಬಂದರೆ ಸಾಕು ವಿಷಗಾಳಿ(Air pollution) ಬಾಂಬ್ ಬ್ಲಾಸ್ಟ್ ಆಗೋದು ಫಿಕ್ಸ್. ಆ ಬಾಂಬ್ಗೆ ನೂರಾರು ಜನ ಬಲಿ ಆಗ್ಹೋದ್ರೆ. ಇನ್ನೂ ಅನೇಕರಿಗೆ ನರಳಾಡೋ ಕಾಯಿಲೆಯನ್ನ ಅಂಟಿಸಿಬಿಟ್ಟು ಹೋಗಿರುತ್ತೆ.

ಇದನ್ನೂ ವೀಕ್ಷಿಸಿ:  ವಿಶಿಷ್ಟ ಸೇವೆ ಮಾಡಿದ 16 ಜನರಿಗೆ ಅಸಮಾನ್ಯ ಕನ್ನಡಿಗ ಅವಾರ್ಡ್: ಸಮಾಜಕ್ಕೆ ಅನನ್ಯ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ