ಸಂಸದ ಪ್ರತಾಪ್ ಸಿಂಹ ಎಡವಿದ್ದೆಲ್ಲಿ..? ಟಾರ್ಗೆಟ್ ಆಗಿದ್ದೇಕೆ..?

ಸಂಸದ ಪ್ರತಾಪ್ ಸಿಂಹ ಎಡವಿದ್ದೆಲ್ಲಿ..? ಟಾರ್ಗೆಟ್ ಆಗಿದ್ದೇಕೆ..?

Published : Dec 15, 2023, 03:46 PM IST

ಬಿಜೆಪಿಯ ಫೈರ್ ಬ್ರ್ಯಾಂಡ್ ಮೇಲೆ ಕಾಂಗ್ರೆಸ್ ಸರ್ಜಿಕಲ್ ಸ್ಟ್ರೈಕ್..!
ಸಂಸತ್ ಭವನದ ಭದ್ರತಾ ಲೋಪಕ್ಕೆ ಪ್ರತಾಪ್ ಸಿಂಹ ಟಾರ್ಗೆಟ್..!
ಅಪರಿಚಿತರಿಗೆ ಸಂಸತ್ ಪಾಸ್ ಕೊಟ್ಟು ಕೆಟ್ಟರಾ ಬಿಜೆಪಿ ಸಂಸದ..?

ಆ ಐದು ನಿಮಿಷ ಲೋಕಸಭೆ(Loksabhe) ನಿಜಕ್ಕೂ ಥಂಡಾ ಹೊಡೆದು ಹೋಗಿತ್ತು. ಬುಧವಾರ ಲೋಕಸಭೆಯ ಒಳಗೆ ನಡೆದ ಘಟನೆ, ಆ ಘಟನೆಯ ಹಿಂದಿನ ಪಿತೂರಿ, ಆ ಪಿತೂರಿಯಲ್ಲಿ ಭಾಗಿಯಾದವರು, ಅವರ ಉದ್ದೇಶ. ಹೀಗೆ ಎಲ್ಲವೂ ನಿಗೂಢ. ಮೈಸೂರಿನ(Mysore)ಮನೋರಂಜನ್, ಲಕ್ನೋದ ಸಾಗರ್ ಶರ್ಮಾ, ಹರ್ಯಾಣದ ನೀಲಮ್ ಕೌರ್ ಮತ್ತು ಮಹಾರಾಷ್ಟ್ರದ ಅನ್ಮೋಲ್ ಶಿಂಧೆ. ಈ ನಾಲ್ಕು ಮಂದಿ ಹೆಣೆದ ಸಂಚು ಸಂಸತ್‌ನ(parliment) ಭದ್ರತಾ ವ್ಯವಸ್ಥೆಯ ಬಗ್ಗೆ ನಾನಾ ಪ್ರಶ್ನೆಗಳು ಹುಟ್ಟುವಂತೆ ಮಾಡಿದೆ. ಇವೆಲ್ಲದರ ಜೊತೆಗೆ ಪ್ರಕರಣದಲ್ಲಿ ದೊಡ್ಡದಾಗಿ ಸದ್ದು ಮಾಡ್ತಿರೋದು, ಸೆಂಟರ್ ಆಫ್ ಟಾರ್ಗೆಟ್ ಆಗ್ತಿರೋದು ಅದೊಂದು ಹೆಸರು. ಅವರೇ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ(Pratap Simha). ಸಂಸತ್ ಭವನಕ್ಕೆ ಇಬ್ಬರು ನುಗ್ಗಿ ಆತಂಕ ಸೃಷ್ಠಿಸಿದ ಬೆನ್ನಲ್ಲೇ, ಹಳ್ಳಿಯಿಂದ ದಿಲ್ಲಿಯವರೆಗೆ ಪ್ರತಾಪ್ ಸಿಂಹ ಅವರ ಬಗ್ಗೆ ಚರ್ಚೆಯಾಗ್ತಿದೆ. ಕಾರಣ ಆ ಆಗಂತುಕರಿಗೆ, ಅಪರಿಚಿತರಿಗೆ ಲೋಕಸಭೆಗೆ ಎಂಟ್ರಿಯಾಗಲು ವಿಸಿಟರ್ ಪಾಸ್ ಕೊಟ್ಟವರೇ ಬಿಜೆಪಿ(BJP) ಸಂಸದ ಪ್ರತಾಪ್ ಸಿಂಹ. ಆ ಪಾಸ್ ಸಿಗದೇ ಇದ್ದಿದ್ದರೆ, ಪ್ರತಾಪ್ ಸಿಂಹ ಕಚೇರಿಯಿಂದ ಆ ಪಾಸ್‌ಗಳನ್ನು ಕೊಡದೇ ಇದ್ದಿದ್ದರೆ ಲೋಕಸಭೆಯೊಳಗೆ ಅಂಥಾ ಒಂದು ಅನಾಹುತ ನಡೀತಾನೇ ಇರ್ಲಿಲ್ಲ. ಇದನ್ನು ನಾವ್ ಹೇಳ್ತಿಲ್ಲ, ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಹೇಳ್ತಾ ಇದ್ದಾರೆ. ಅಷ್ಟೇ ಅಲ್ಲ, ಎಲ್ಲಾ ಸಂದರ್ಭಗಳಲ್ಲಿ ಬೇರೆಯವರ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಮಾಡುವ ಪ್ರತಾಪ್ ಸಿಂಹ, ಈಗ ಯಾಕೆ ಮೌನವಾಗಿದ್ದಾರೆ ಅಂತ ಕೈ ನಾಯಕರು ಪ್ರಶ್ನಿಸ್ತಾ ಇದ್ದಾರೆ.

ಇದನ್ನೂ ವೀಕ್ಷಿಸಿ:  ಸಂಸತ್ ಸಂಚಿನ ರಹಸ್ಯವೇನು ಗೊತ್ತಾ..? ಯಾರು ಈ ಆಗಂತುಕರು? ಏನಿವರ ಅಸಲಿ ಕತೆ!

21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
Read more