ಬದಲಾದ ವಿನ್ಯಾಸದ ರಾಜಪಥದಲ್ಲಿ 73ನೇ ಗಣರಾಜ್ಯೋತ್ಸವದ ಅದ್ಧೂರಿ ಸಂಭ್ರಮ

ಬದಲಾದ ವಿನ್ಯಾಸದ ರಾಜಪಥದಲ್ಲಿ 73ನೇ ಗಣರಾಜ್ಯೋತ್ಸವದ ಅದ್ಧೂರಿ ಸಂಭ್ರಮ

Suvarna News   | Asianet News
Published : Jan 27, 2022, 02:35 PM ISTUpdated : Apr 22, 2022, 12:24 PM IST

ದೆಹಲಿಯ ರಾಜ್ ಪಥ್‌ನಲ್ಲಿ ಗಣ ರಾಜ್ಯೋತ್ಸವದ ಪೆರೇಡ್‌ ಅನ್ನು ಕಣ್ಥುಂಬಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನಿಗೂ ಅತ್ಯಂತ ಹೆಮ್ಮೆಯ ಕ್ಷಣ. ಪ್ರತಿಯೊಂದು ಸ್ತಬ್ಧ ಚಿತ್ರಗಳು ಸಾಗುವಾಗ, ವೈಮಾನಿಕ ಪ್ರದರ್ಶನ ನೋಡುವಾಗ, ನಮ್ಮ ಭಾರತೀಯ ಸೈನಿಕರ ಶೌರ್ಯ ಪ್ರದರ್ಶನಗೊಳ್ಳುವಾಗ, ಭಾರತೀಯ ಸೇನೆಯ ಶಕ್ತಿಯನ್ನು ಪ್ರಪಂಚಕ್ಕೆ ತೋರಿಸುವಾಗ ದೇಶ ಭಕ್ತರಿಗೆ ರೋಮಾಂಚನ ಎನಿಸುವುದು ಸುಳ್ಳಲ್ಲ. ಅಂಥದ್ರಲ್ಲಿ ಈ ವರ್ಷದ ಸಂಭ್ರಮ ಮತ್ತಷ್ಟು ವಿಭಿನ್ನತೆಯಿಂದ ಕೂಡಿದ್ದವು. ಏನಿದ್ದವು ಅಂಥ ವಿಶೇಷಗಳು? 

ಕೊರೋನಾ  (Covid19) ಕಾರಣದಿಂದ ಜನರ ಭಾಗವಹಿಸುವಿಕೆಗೆ ಮಿತಿ ವಿಧಿಸಿದ್ದರೂ, ರಾಷ್ಟ್ರ ರಾಜಧಾನಿಯ ರಾಜಪಥದಲ್ಲಿ ಭಾರತದ 73ನೇ ಗಣರಾಜ್ಯೋತ್ಸವದ (Republic Day) ಆಚರಣೆ ಬುಧವಾರ ಅದ್ಧೂರಿಯಾಗಿ ನಡೆಯಿತು. ಸೆಂಟ್ರಲ್‌ ವಿಸ್ತಾ ಯೋಜನೆಯಡಿ ನವೀಕರಣಗೊಳಿಸಲಾದ ರಾಜಪಥದಲ್ಲಿ ಈ ಸಲದ ಗಣತಂತ್ರ ದಿನದ ಪರೇಡ್‌ ವಿಭಿನ್ನವೂ, ವೈಭವೋಪೇತವೂ ಆಗಿತ್ತು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ 75 ಯುದ್ಧ ವಿಮಾನಗಳನ್ನು ರಾಜಪಥದ ಮೇಲೆ ಹಾರಿಸಿದ್ದು ವಿಶೇಷವಾಗಿತ್ತು. ಕರ್ನಾಟಕದ ಕರಕುಶಲ ಕಲೆಗಳ ಸ್ತಬ್ಧಚಿತ್ರವೂ ಸೇರಿದಂತೆ ಅತ್ಯಾಕರ್ಷಕ 12 ಸ್ತಬ್ಧಚಿತ್ರಗಳು ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ರಾಜಪಥದಲ್ಲಿ ಸಾಗುವ ಮೂಲಕ ಪ್ಷೇಕ್ಷಕರ ಮನಸೂರೆಗೊಂಡವು. ಕಡಿಮೆ ಜನರ ಸಮ್ಮುಖದಲ್ಲಿ ನಡೆದ ಪೆರೇಡ್‌ನಲ್ಲಿ ಭಾರತೀಯ ಸೇನೆಯ ಶೌರ್ಯ ಮತ್ತು ದೇಶದ ವೈವಿಧ್ಯತೆ ಪ್ರದರ್ಶಿತಗೊಂಡಿದ್ದು ಹೇಗೆ? ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ, ಪ್ರಖರ ವಾಗ್ಮಿ ಚಕ್ರವರ್ತಿ ಸೂಲಿಬೆಲೆ (Chakravarthi Suibele) ಮತ್ತು ಏರ್ ಮಾರ್ಷಲ್ ಮುರಳೀಧರ್ ಏನು ಹೇಳುತ್ತಾರೆ. ಪ್ರತಿಯೊಬ್ಬ ಭಾರತೀಯನ (Indian) ಎದೆಯುಬ್ಬುವಂತೆ ಮಾಡಿದ ಗಣರಾಜ್ಯತ್ಸವದ ತುಣುಕುಗಳಿವು. 

ಗಣರಾಜ್ಯತ್ಸವದಲ್ಲಿ ವೈಮಾನಿಕ ಪ್ರದರ್ಶನಗೊಂಡಿದ್ದು ಹೇಗೆ?

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
24:19ಮುಸ್ಲಿಮರೆಲ್ಲಾ ಒಂದೇ ಥರ ಅಲ್ಲ.. ಹೀಗೆ ಹೇಳಿದ್ದೇಕೆ ಭಾಗವತ್? RSS ವಿರುದ್ಧದ ಪ್ರಶ್ನೆಗಳಿಗೆಲ್ಲಾ ಮೋಹನ್ ಭಾಗವತ್ ಉತ್ತರ!
Read more