Sep 30, 2020, 10:50 AM IST
ಬೆಂಗಳೂರು (ಸೆ. 30): 1992 ರಲ್ಲಿ ಧ್ವಂಸಗೊಂಡಿದ್ದ ಅಯೋಧ್ಯೆ ಬಾಬ್ರಿ ಮಸೀದಿ ಪ್ರಕರಣದ ತೀರ್ಪು ಇಂದು ಪ್ರಕಟವಾಗಲಿದೆ. ಇದರೊಂದಿಗೆ ಬಿಜೆಪಿ ಮುಖಂಡರಾದ ಎಲ್.ಕೆ. ಅಡ್ವಾಣಿ (92), ಮುರಳಿಮನೋಹರ ಜೋಶಿ (86), ಉಮಾಭಾರತಿ ಸೇರಿ 32 ಆರೋಪಿಗಳ ಹಣೆಬರಹ, ಘಟನೆ ನಡೆದ 28 ವರ್ಷ ಬಳಿಕ ನಿರ್ಧಾರವಾಗಲಿದೆ.
ಎಲ್ಲ 32 ಆರೋಪಿಗಳೂ ಖುದ್ದು ಹಾಜರಿರಬೇಕು ಎಂದು ಈಗಾಗಲೇ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್.ಕೆ. ಯಾದವ್ ಸೂಚಿಸಿದ್ದಾರೆ.
ಆದರೆ ಅನಾರೋಗ್ಯ, ಕೋವಿಡ್, ಕೋವಿಡ್‌ನಿಂದ ಈಗಷ್ಟೇ ಚೇತರಿಸಿಕೊಂಡಿರುವ ಕಾರಣ ಅಡ್ವಾಣಿ, ಜೋಶಿ, ಉಮಾಭಾರತಿ, ಕಲ್ಯಾಣ್‌ಸಿಂಗ್, ಚಂಪತ್‌ರಾಯ್ ಬುಧವಾರ ತೀರ್ಪು ಪ್ರಕಟದ ವೇಳೆ ನ್ಯಾಯಾಲಯದಲ್ಲಿ ಹಾಜರಿರುವುದಿಲ್ಲ. ಬಿಜೆಪಿ ನಾಯಕರ ಭವಿಷ್ಯ ಇಂದು ನಿರ್ಧಾರವಾಗಲಿದೆ.