ಕರ್ನಾಟಕಕ್ಕೆ ‘ಹಿಂದ್‌ ವಿಲಾಯಾ’ 200 ಉಗ್ರರ ಬೆದರಿಕೆ; ವಿಶ್ವಸಂಸ್ಥೆಯಿಂದ ಎಚ್ಚರಿಕೆ

Jul 27, 2020, 6:40 PM IST

ಬೆಂಗಳೂರು (ಜು. 27): ಜಗತ್ತಿನ ಹಲವು ದೇಶಗಳಲ್ಲಿ ಭಾರೀ ಅನಾಹುತ ಸೃಷ್ಟಿಸುತ್ತಿರುವ ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಉಗ್ರರು ಕರ್ನಾಟಕ ಹಾಗೂ ಕೇರಳದಲ್ಲೂ ಸಾಕಷ್ಟುಸಂಖ್ಯೆಯಲ್ಲಿ ಇದ್ದಾರೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಎಚ್ಚರಿಸಿದೆ. ಐಸಿಸ್‌, ಅಲ್‌ಖೈದಾ ಹಾಗೂ ಇತರ ಸಹವರ್ತಿ ಉಗ್ರ ಸಂಘಟನೆಗಳ ಕುರಿತಾದ ವಿಶ್ವಸಂಸ್ಥೆ ತಂಡದ 26ನೇ ವರದಿಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ.

‘ಭಾರತದಲ್ಲಿ ಐಸಿಸ್‌ ಸಂಘಟನೆಯು ‘ಹಿಂದ್‌ ವಿಲಾಯಾ’ ಎಂಬ ಸೋದರ ಸಂಘಟನೆ ಹೊಂದಿದೆ. 2019ರಲ್ಲಿ ಸ್ಥಾಪನೆಯಾದ ಇದರಲ್ಲಿ 180ರಿಂದ 200 ಉಗ್ರರು ಇದ್ದಾರೆ. ಕರ್ನಾಟಕ ಹಾಗೂ ಕೇರಳದ ಸಾಕಷ್ಟುಸಂಖ್ಯೆಯಲ್ಲಿ ಈ ಸಂಘಟನೆಗೆ ಸೇರಿದ ಭಯೋತ್ಪಾದಕರಿದ್ದಾರೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಕರ್ನಾಟಕ, ಕೇರಳದಲ್ಲಿ ಐಸಿಸ್ ಉಗ್ರರ ಸಂಖ್ಯೆ ಹೆಚ್ಚಳ; ದಾಳಿಗೆ ಅಲ್‌ಖೈದಾ ಸಂಚು