ಭೌತ ವಿಜ್ಞಾನಿಯ ಕನಸಿನ ಕೂಸು ರಾಮನ್ ಸಂಶೋಧನಾ ಸಂಸ್ಥೆಗೆ ಅಮೃತ ಮಹೋತ್ಸವ ಯಾತ್ರೆ

ಭೌತ ವಿಜ್ಞಾನಿಯ ಕನಸಿನ ಕೂಸು ರಾಮನ್ ಸಂಶೋಧನಾ ಸಂಸ್ಥೆಗೆ ಅಮೃತ ಮಹೋತ್ಸವ ಯಾತ್ರೆ

Published : Aug 22, 2022, 06:16 PM IST

ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡಪ್ರಭ ಜಂಟಿಯಾಗಿ ಆಯೋಜಿಸಿದ ಭಾರತ ಅಮೃತಮಹೋತ್ಸವ ಯಾತ್ರೆ ಅಂಗವಾಗಿ ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ ಭೇಟಿ ನೀಡಲಾಯಿತು. 

ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡಪ್ರಭ ಜಂಟಿಯಾಗಿ ಆಯೋಜಿಸಿದ ಭಾರತ ಅಮೃತಮಹೋತ್ಸವ ಯಾತ್ರೆ ಯಶಸ್ವಿಯಾಗಿದೆ. ಉತ್ಸಾಹಿ ಎನ್‌ಸಿಸಿ ಕೆಡೆಟ್‌ಗಳೊಂದಿಗೆ ಬೆಂಗಳೂರಿನಲ್ಲಿರುವ ವೈಜ್ಞಾನಿಕ ಸಂಶೋಧನೆಯ ಸಂಸ್ಥೆಯಾದ ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್  ಭೇಟಿ ನೀಡಲಾಯಿತು.  ನೊಬೆಲ್ ಪುರಸ್ಕೃತ ಸರ್ ಸಿ.ವಿ.ರಾಮನ್‍ರವರು  1948ರಲ್ಲಿ  ಈ ಸಂಸ್ಥೆಯನ್ನು ಸ್ಥಾಪಿಸಿದ್ದರು. ಖಗೋಳ ವಿಜ್ಞಾನ ಮತ್ತು  ಭೌತವಿಜ್ಞಾನ ಸೇರಿ ವಿವಿಧ ಬಗ್ಗೆ ಇಲ್ಲಿ ಸಂಶೋಧನೆಗಳು ನಡೆಯುತ್ತದೆ.  ಭಾರತೀಯ ವಿಜ್ಞಾನ ಮಂದಿರದ ಹುದ್ದೆಯಿಂದ 1948ರಲ್ಲಿ ರಾಮನ್‍ ಅವರು ನಿವೃತ್ತಿಯಾಗುವವರಿದ್ದರು. ನಿವೃತ್ತಿ ಬಳಿಕ ಅವರು ಬೆಂಗಳೂರಿನಲ್ಲಿಯೇ ನೆಲೆಸಿ ಸ್ವತಂತ್ರ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಿ ಸಂಶೋಧನೆಯನ್ನು ಮುಂದುವರೆಸುವ ಇರಾದೆ ಹೊಂದಿದ್ದರು, ಇವರ ಆಸಕ್ತಿಯನ್ನು ಅರಿತಿದ್ದ  ಮೈಸೂರಿನ ಮಹಾರಾಜರಾ ನಾಲ್ಕನೇ ಕೃಷ್ಣರಾಜ ಒಡೆಯರ್ ಭಾರತೀಯ ವಿಜ್ಞಾನ ಮಂದಿರದ ಬಳಿಯೇ 10 ಎಕರೆ ಜಾಗವನ್ನು 1938ರಲ್ಲಿ ಕೊಡುಗಡೆಯಾಗಿ ನೀಡಿದರು. ಹೀಗಾಗಿ 1943 ರಲ್ಲಿ ಭಾರತೀಯ ವಿಜ್ಞಾನ ಮಂದಿರ ಮತ್ತು ರಾಮನ್ ನಡುವೆ ಒಪ್ಪಂದವಾಗಿ ಸಂಸ್ಥೆ ಕಟ್ಟಲು ಆರಂಭವಾಯ್ತು. 1948ರಲ್ಲಿ ಇದು ಪೂರ್ಣಗೊಂಡಿತು.

01:13ಮದ್ವೆಗೆ ಟಿ-ಶರ್ಟ್‌ನಲ್ಲಿ ಬಂದ ಬಾಬಿ ಡಿಯೋಲ್‌; ಏನಾಗಿದೆ ನಿನಗೆ ಎಂದು ಕಾಲೆಳೆದ ನೆಟ್ಟಿಗರು
20:46ಭೌತ ವಿಜ್ಞಾನಿಯ ಕನಸಿನ ಕೂಸು ರಾಮನ್ ಸಂಶೋಧನಾ ಸಂಸ್ಥೆಗೆ ಅಮೃತ ಮಹೋತ್ಸವ ಯಾತ್ರೆ
03:01India@75: ಕೊಳಲಲ್ಲಿ ದಿಲ್ ದಿಯಾ ಹೈ ಜಾನ್ ಭಿ ದೇಂಗೆ ನುಡಿಸಿದ ಐಟಿಬಿಪಿಯ ಕಾನ್‌ಸ್ಟೇಬಲ್‌
05:19Mangaluru; 900 ಕೆ.ಜಿ ಧಾನ್ಯಗಳಲ್ಲಿ ಮೂಡಿಬಂದ ತ್ರಿವರ್ಣ ಧ್ವಜ
05:53India@75: ಚಿಕ್ಕಬಳ್ಳಾಪುರದಲ್ಲಿ ತ್ರಿವರ್ಣ ನಡಿಗೆಗೆ ಡಾ. ಸುಧಾಕರ್ ಚಾಲನೆ
05:56India@75:ಭಾರತದ ಸಮಾಜ ಸುಧಾರಣೆಯ ಪಿತಾಮಹ ಮಹಾತ್ಮ ಜ್ಯೋತಿಬಾ ಪುಲೆ ಜೀವನಗಾಥೆ
21:23ಅಮೃತ ಮಹೋತ್ಸವಕ್ಕೆ ಹರ್ ಘರ್ ತಿರಂಗ ಅಭಿಯಾನ, ಮನೆ ಮನೆಗೂ ತ್ರಿವರ್ಣ!
05:44India@75: ಕೇರಳದ ಭಗತ್‌ಸಿಂಗ್ ವಕ್ಕಂ ಮೊಹಮ್ಮದ್ ಅಬ್ದುಲ್ ಖಾದರ್ ಹೋರಾಟದ ಕತೆ
04:12India@75: 3 ನೇ ದಿನಕ್ಕೆ ಕಾಲಿಟ್ಟ ವಿಜಯಪುರ ಯುವಜನ ಸಂಕಲ್ಪ ನಡಿಗೆ
Read more